ದೇಶ

ಆದಾಯ ಸ್ಥಿರವಾದ ನಂತರವೇ ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನ: ಸುಶಿಲ್ ಮೋದಿ

Lingaraj Badiger
ಕೋಲ್ಕತಾ: 1 ಲಕ್ಷ ಕೋಟಿ ರುಪಾಯಿ ತಿಂಗಳ ಆದಾಯದ ಗುರಿ ತಲುಪಿದ ನಂತರವೇ ಪೆಟ್ರೋಲಿಯ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್ ಟಿ ಮಂಡಳಿ ವಿಚಾರ ಮಾಡಬೇಕು ಎಂದು ಜಿಎಸ್ ಟಿ ಮಂಡಳಿ ಸದಸ್ಯ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ಸುಶಿಲ್ ಮೋದಿ ಅವರು ಗುರುವಾರ ಹೇಳಿದ್ದಾರೆ.
ಆರಂಭಿಕ ತಿಂಗಳಲ್ಲಿ ಪರೋಕ್ಷ ತೆರಿಗೆಯ ಆದಾಯದಲ್ಲಿ ಕೊರತೆ ಇದೆ. ಆದಾಯ ಹೆಚ್ಚಳವಾಗಲು ಸಮಯ ಬೇಕಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳು, ಸ್ಟಾಂಪ್ ಮತ್ತು ವಿದ್ಯುತ್ ಬಿಲ್ ಅನ್ನು ಸಹ ಜಿಎಸ್ ಟಿ ವ್ಯಾಪ್ತಿಗೆ ತಂದರೆ ಮಾತ್ರ ನೂತನ ತೆರಿಗೆ ಪದ್ಧತಿ ಯಶಸ್ವಿಯಾಗಲಿದೆ ಎಂದು ಬಿಹಾರ ಡಿಸಿಎಂ ತಿಳಿಸಿದ್ದಾರೆ.
ಜಿಎಸ್ ಟಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ರೀತಿ ನೋಡಿದರೆ, ಮೂರು ವರ್ಷಗಳ ನಂತರ ಯಾವುದೇ ರಾಜ್ಯಕ್ಕೂ ಪರಿಹಾರ ನೀಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಜೆಎಸ್ ಟಿ ತೆರಿಗೆ ದರ ಕಡಿಮೆ ಮಾಡಿದರೆ ಮುಂದಿನ ಮೂರು ನಾಲ್ಕು ತಿಂಗಳು ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
SCROLL FOR NEXT