ಇದು ಆಪ್ ಆಡಳಿತದ ದೆಹಲಿ ಸರ್ಕಾರಿ ಶಾಲೆ!
ದೆಹಲಿಯ ಆಮ್ ಆದ್ಮಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಖಾಸಗಿ ಶಾಲೆಗಳೇ ಸರ್ಕಾರಿ ಶಾಲೆಯನ್ನು ಅನುಸರಿಸುವಂತೆ....
ನವದೆಹಲಿ: ದೆಹಲಿಯ ಆಮ್ ಆದ್ಮಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಖಾಸಗಿ ಶಾಲೆಗಳೇ ಸರ್ಕಾರಿ ಶಾಲೆಯನ್ನು ಅನುಸರಿಸುವಂತೆ ಮಾಡಿದೆ.
ಹೌದು, ಅಚ್ಚರಿಯಾದರು ನಿಜ. ದೆಹಲಿ ಸರ್ಕಾರಿ ಶಾಲೆಯ ಈ ಫೋಟೋವನ್ನು ನೋಡಿ ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ಹೊಸ ಕಲ್ಪನೆಯ ಈ ಡೆಸ್ಕ್ ಗಳನ್ನು ನಮ್ಮ ಶಾಲೆಗೂ ಖರೀದಿಸಬೇಕು. ಅದರ ಬಗ್ಗೆ ಮಾಹಿತಿ ಕೊಡಿ ಎಂದು ನಿನ್ನೆ ತಮಗೆ ಕರೆ ಮಾಡಿ ಕೇಳಿಕೊಂಡಿರುವುದಾಗಿ ದೆಹಲಿ ಸರ್ಕಾರದ ಸಲಹೆಗಾರ್ತಿ ಆತಿಶಿ ಮರ್ಲೆನಾ ಅವರು ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಕಳಪೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿದ ಖ್ಯಾತಿ ಮರ್ಲೆನಾ ಅವರದ್ದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.