ಪ್ರಧಾನಿ ಮೋದಿ 
ದೇಶ

ಪ್ರಧಾನಿ ಮೋದಿಯಿಂದ ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆ

ರಸ್ತೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಗ್ರಾಮೀಣ, ನಗರ ಮನೆ, ರೈಲ್ವೆ, ವಿಮಾನ ಮತ್ತು ಬಂದರುಗಳಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ನರೇಂದ್ರಮೋದಿ ಇಂದು ಪರಿಶೀಲನೆ ನಡೆಸಿದರು.

ನವದೆಹಲಿ: ರಸ್ತೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಗ್ರಾಮೀಣ, ನಗರ ಮನೆ, ರೈಲ್ವೆ, ವಿಮಾನ ಮತ್ತು ಬಂದರುಗಳಂತಹ  ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ನರೇಂದ್ರಮೋದಿ ಇಂದು ಪರಿಶೀಲನೆ ನಡೆಸಿದರು.

ಮೂಲಸೌಕರ್ಯ ಸಂಬಂಧಿತ ಸಚಿವಾಲಯ  ಹಾಗೂ ನೀತಿ ಆಯೋಗ, ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

2013-14ರ ಆರ್ಥಿಕ ವರ್ಷದಲ್ಲಿ ಪ್ರತಿದಿನ 11. 67 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗುತಿತ್ತು.  2017-18ರ ಆರ್ಥಿಕ ವರ್ಷದಲ್ಲಿ 26.93 ಕಿಲೋಮೀಟರ್  ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ನೀತಿ ಆಯೋಗ ಸಿಇಒ ಅಮಿತಾಬ್ ಕಾಂತ್  ವಿವರಿಸಿದರು.

ವಿದ್ಯುನ್ಮಾನ ಟೋಲು ಸಂಗ್ರಹದಿಂದ ಶೇ. 22 ರಷ್ಟು ಟೋಲ್ ಆದಾಯ ಸಂಗ್ರಹಣೆ ಮಾಡಲಾಗುತ್ತಿದೆ. ಸುಖದ್ ಯಾತ್ರೆ ಆಪ್ ಮೂಲಕ ರಸ್ತೆ ಸ್ಥಿತಿ,  ದೂರು ದಾಖಲು ಮತ್ತಿತರ ಸವಲತ್ತು ಒದಗಿಸಲಾಗುತ್ತಿದ್ದು, 1 ಲಕ್ಷ ಡೌನ್ ಲೋಡ್ ಆಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್  ಯೋಜನೆಯಡಿ 2014 ರಿಂದ 2018ರವರೆಗೂ 44 ಸಾವಿರ ಹಳ್ಳಿಗಳನ್ನು ಸಂಪರ್ಕಿಸಲಾಗಿತ್ತು 10 ಪ್ರಾದೇಶಿಕ ಭಾಷೆಗಳಲ್ಲಿ ಮೇರಿ  ಸಡಕ್ ಆಪ್ ಚಾಲನೆಗೊಳಿಸಲಾಗಿದ್ದು, 9. 76 ಲಕ್ಷ ಡೈನ್ ಲೋಡ್ ಆಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ