ಸೂರತ್: ತಂದೆ-ತಾಯಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗಿದ್ದು ಈ ವೇಳೆ ಮೂವರು ವರ್ಷದ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗುಜರಾತ್ ನಲ್ಲಿ ನಡೆದಿದೆ.
ದಂಪತಿ ಇಬ್ಬರು ಮಕ್ಕಳ ಜತೆ ಗಾರ್ಡನ್ ಗೆ ಬಂದಿದ್ದರು. ಈ ವೇಳೆ ದಂಪತಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಮೂರು ವರ್ಷದ ಮಗು ಪಕ್ಕದಲ್ಲೇ ಇದ್ದ ಕೆರೆಗೆ ಬಿದ್ದು ಮುಳುಗಿದೆ. ಇದರ ಪರಿವೇ ಇಲ್ಲದೆ ದಂಪತಿಗಳು ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗಿದ್ದರು.
ಕೆಲ ಸಮಯದ ನಂತರ ಮಗು ಅಲ್ಲಿರದಿರುವುದು ಗಮನಿಸಿದ ದಂಪತಿ ಗಾರ್ಡನ್ ನಲ್ಲಿ ಹುಡುಕಾಡಿದ್ದಾರೆ. ಎಷ್ಟೇ ಹುಡುಕಿದರು ಮಗು ಸಿಗದಿದ್ದ ಕಾರಣ ದಂಪತಿ ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಮಗು ಅಪಹರಣವಾಗಿದೆ ಎಂದು ದೂರು ಕೊಟ್ಟಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮಗು ನಾಪತ್ತೆಯಾದ ಸ್ಥಳದಲ್ಲಿದ್ದ ಕೆರೆಯ ಬಳಿ ಆಕೆಯ ಶೂ ಸಿಕ್ಕಿದೆ.
ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ಮಗುವಿನ ದೇಹವನ್ನು ಮೇಲೆತ್ತಿದಾಗಲೇ ಮಗು ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics