ದೆಹಲಿಗೂ ಎನ್ ಆರ್ ಸಿ ಬೇಕೆಂದ ಬಿಜೆಪಿ ಶಾಸಕ: ವಿಧಾನಸಭೆಯಿಂದ ಹೊರಕ್ಕೆ! 
ದೇಶ

ದೆಹಲಿಗೂ ಎನ್ ಆರ್ ಸಿ ಬೇಕೆಂದ ಬಿಜೆಪಿ ಶಾಸಕ: ವಿಧಾನಸಭೆಯಿಂದ ಹೊರಕ್ಕೆ!

ದೆಹಲಿಗೂ ಎನ್ ಆರ್ ಸಿ (ರಾಷ್ಟ್ರೀಯ ಪೌರ ನೋಂದಣಿ) ಅಗತ್ಯವಿದೆ ಎಂದು ದೆಹಲಿ ಶಾಸಕ ವಿಜಯೇಂದ್ರ ಗುಪ್ತ ಆಗ್ರಹಿಸಿದ್ದಾರೆ.

ನವದೆಹಲಿ: ದೆಹಲಿಗೂ ಎನ್ ಆರ್ ಸಿ (ರಾಷ್ಟ್ರೀಯ ಪೌರ ನೋಂದಣಿ) ಅಗತ್ಯವಿದೆ ಎಂದು ದೆಹಲಿ ಶಾಸಕ ವಿಜಯೇಂದ್ರ ಗುಪ್ತ ಆಗ್ರಹಿಸಿದ್ದಾರೆ. 
ಬಿಜೆಪಿ ಶಾಸಕರ ಆಗ್ರಹ ದೆಹಲಿ ವಿಧಾನಸಭೆಯಲ್ಲಿ ಗದ್ದಲ ಉಂಟುಮಾಡಿದ್ದು, ವಿಜಯೇಂದ್ರ ಗುಪ್ತ ಅವರನ್ನು ದೆಹಲಿ ವಿಧಾನಸಭೆಯಿಂದ ಹೊರಹಾಕಿದ ಘಟನೆ ನಡೆದಿದೆ. ಆ.06 ರಂದು ವಿಧಾನಸಭೆಯ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆಯೇ ಗುಪ್ತಾ, ಸಾರ್ವಜನಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಆಗ್ರಹಿಸಿದರು. ಆದರೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಈಗಾಗಲೇ ಗುರುತು ಹಾಕಿದ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಸಲು ಸೂಚಿಸಿದರು. 
ಆದರೆ ಗುಪ್ತ ಅವರು ಸಾರ್ವಜನಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಗದ್ದಲ ಉಂಟು ಮಾಡಿದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಧಾನಸಭೆಯಿಂದ ಹೊರಗೆ ಕಳಿಸಲಾಗಿದೆ. ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜಯೇಂದ್ರ ಗುಪ್ತ, ದೆಹಲಿಗೂ ಎನ್ ಆರ್ ಸಿ ಜಾರಿಗೊಳಿಸುವುದರ ಸಂಬಂಧ ಚರ್ಚೆ ನಡೆಸುವುದಕ್ಕೆ ಆಗ್ರಹಿಸಿದ್ದೆ. ಆದರೆ ದೆಹಲಿ ಸರ್ಕಾರ ಬಾಂಗ್ಲಾದೇಶಿಗಳಿಗೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಗುಪ್ತಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್