ದೇಶ

ಜಮ್ಮು ಮತ್ತು ಕಾಶ್ಮೀರ: ಎಂಟು ಗ್ರೆನೇಡ್‌ ಸಹಿತ ಓರ್ವ ಶಂಕಿತ ಉಗ್ರನ ಬಂಧನ

Srinivasamurthy VN
ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ಷಣೆಗೆ ನಿಯೋಜನೆಗೊಂಡಿರುವ ಭಾರತೀಯ ಸೇನಾಪಡೆಗಳ ಮೇಲೆ ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಬಂದಿದ್ದ ಶಂಕಿತ ಉಗ್ರನೋರ್ವನನ್ನು ಭಾರತೀಯ ಸೇನಾಪಡೆಗಳು ಬಂಧಿಸಿವೆ.
ದೊಡ್ಡ ಮಟ್ಟದ ದಾಳಿ ಮಾಡಲು ಸಂಚು ರೂಪಿಸಿಕೊಂಡು ಬಂದಿದ್ದ ಶಂಕಿತ ಭಯೋತ್ಪಾದಕನೊಬ್ಬನನ್ನು ಜಮ್ಮು ಪೊಲೀಸರು ಮತ್ತು ಭಾರತೀಯ ಸೇನಾಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 8 ಗ್ರೆನೇಡ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 
ಸೇನಾ ಮೂಲಗಳ ಪ್ರಕಾರ ಗುಪ್ತಚರ ಇಲಾಖೆ ನೀಡಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಪುಲ್ವಾಮಾ ಜಿಲ್ಲೆಯ ಗಾಂಧಿನಗರ ಪ್ರದೇಶದಲ್ಲಿ ಕಾಶ್ಮೀರ ಮೂಲದ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದು, ಆತನಿಂದ ಎಂಟು ಗ್ರೆನೇಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಾಂತಿಪೋರಾ ಜಿಲ್ಲೆಯ ಅರ್ಫಾನ್‌ ವಾನಿಯೇ ಬಂಧಿತ ಶಂಕಿತ ಭಯೋತ್ಪಾದಕನಾಗಿದ್ದು, ಈತನ ಬಳಿ 60,000ರೂಗಳಷ್ಟು ನಗದನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ  ಮೂಲಕ ಸ್ವತಂತ್ರ ದಿನಾಚರಣೆಗೂ ಮುನ್ನ ಭಯದ ವಾತಾವರಣ ಮೂಡಿಸಲು ಭಾರೀ ಮಟ್ಟದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಉಗ್ರ ಸಂಘಟನೆಗಳ ಸಂಚು ವಿಫಲವಾಗಿದೆ. ಸ್ವತಂತ್ರ ದಿನಾಚರಣೆಗೂ ಮುನ್ನ ಭಾರೀ ಮಟ್ಟದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನ ಮೂಲಕ ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತೊಯ್ಬಾ ಹಾಗು ಜೈಶ್ ಇ ಮೊಹಮ್ಮದ್‌ ಸಂಚು ರೂಪಿಸಿವೆ ಎಂದು ಈ ಹಿಂದೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು,
SCROLL FOR NEXT