ಗುವಾಹಟಿ : ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಪರಿಷ್ಕೃತ ಕರಡು ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಗಡಿಪಾರು ಅಥವಾ ಜೈಲಿಗೆ ಕಳುಹಿಸುವುದಿಲ್ಲ ಎಂದು ಎನ್ ಆರ್ ಸಿ ರಾಜ್ಯ ಸಂಯೋಜಕ ಪ್ರತೀಕ್ ಹಜಿಲಾ ತಿಳಿಸಿದ್ದಾರೆ.
ಜುಲೈ 30 ರಂದು ಬಿಡುಗಡೆಯಾದ ಕರಡುವಿನಲ್ಲಿ ಸುಮಾರು 40 ಲಕ್ಷ ಜನರ ಹೆಸರನ್ನು ಕೈ ಬಿಡಲಾಗಿದೆ. 3.29 ಕೋಟಿ ಅರ್ಜಿದಾರರಲ್ಲಿ 2.89 ಕೋಟಿ ಜನರ ಹೆಸರುಗಳನ್ನು ಮಾತ್ರ ಕರಡು ಒಳಗೊಂಡಿತ್ತು.
ಎನ್ ಆರ್ ಸಿ ಕರಡುವಿನಲ್ಲಿ ಹೆಸರಿಲ್ಲದ 40 ಲಕ್ಷ ಜನರು ಏಲ್ಲಿಗೆ ಹೋಗಬೇಕು ಎಂದು ಕರಡು ಬಿಡುಗಡೆಯಾದಾಗಿನಿಂದಲೂ ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಮುಗಿ ಬಿದ್ದಿವೆ.
ಇದು ತನ್ನ ಆದೇಶ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಎನ್ ಆರ್ ಸಿಯಲ್ಲಿ ಹೆಸರಿಲ್ಲದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಹಜಿಲಾ ಸ್ಪಷ್ಪಪಡಿಸಿದ್ದಾರೆ.