ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ಕಲ್ಪಿಸುವ ಮಸೂದೆ ರಾಜ್ಯಸಭೆಯಲ್ಲಿಂದು ಅಂಗೀಕಾರಗೊಂಡಿತು.
ಈಗಿರುವಂತೆ ಮೀಸಲಾತಿ ಅನುಷ್ಠಾನಗೊಳಿಸಬೇಕು ಮತ್ತು ಜನರು ಕೂಡಾ ಜಾತಿ ಸಮೀಕ್ಷೆ ಗುರುತಿಸುವಂತೆ ಸರ್ಕಾರ ಮಾಡಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು. ಲೋಕಸಭೆಯಲ್ಲಿ ಆಗಸ್ಟ್ 2 ರಂದು ಅಂಗೀಕಾರಗೊಂಡ ಸಂವಿಧಾನದ 123 ನೇ ತಿದ್ದುಪಡಿ ಮಸೂದೆ 2017 ಮೇಲಿನ ಚರ್ಚೆ ಸಂದರ್ಭದಲ್ಲಿ ಈ ಒತ್ತಾಯ ಕೇಳಿಬಂದಿತ್ತು.
ಲೋಕಸಭೆಯಲ್ಲಿ ಮಾಡಲ್ಪಟ್ಟ ತಿದ್ದುಪಡಿಯೊಂದಿಗೆ 156 ಮತಗಳ ಮೂಲಕ ರಾಜ್ಯಸಭೆಯಲ್ಲಿಯೂ ಮಸೂದೆ ಅಂಗೀಕಾರಗೊಂಡಿತು.
ಸಂವಿಧಾನ ತಿದ್ದುಪಡಿಗೆ 3/2 ರಷ್ಟು ಸದಸ್ಯರ ಬೆಂಬಲ ಅಗತ್ಯವಾಗಿದ್ದು, ಕಳೆದ ವರ್ಷ ಜುಲೈ 31 ರಂದು ಕೆಲ ತಿದ್ದುಪಡಿಗಳೊಂದಿಗೆ ಲೋಕಸಭೆಗೆ ಕಳುಹಿಸಿತ್ತು. ಕೆಲ ಬದಲಾವಣೆಯೊಂದಿಗೆ ಕಳೆದ ವಾರ ಲೋಕಸಭೆಯಲ್ಲಿ ಮಸೂದೆ ಸರ್ವಾನುಮತದಿಂದ ಅಂಗೀಕಾರ ಪಡೆದುಕೊಂಡಿತ್ತು.
ಮಸೂದೆ ಮಂಡಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್, ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ ನಡೆಸಲು ಹಾಗೂ ಅವರಿಗೆ ಕ್ಷಿಪ್ರಗತಿಯಲ್ಲಿ ನ್ಯಾಯ ದೊರಕಿಸಿಕೊಡಲು ಈ ಮಸೂದೆ ನೆರವಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಮಹಿಳಾ ಪ್ರಾತಿನಿಧ್ಯ ಹೊಂದಿದ್ದು, ಪ್ರತಿಪಕ್ಷಗಳು ಸಲಹೆ ನೀಡುವಂತೆ ಗೆಹ್ಲೋಟ್ ವಿವರಿಸಿದರು. ಹಿಂದುಳಿದ ಜನರಲ್ಲಿ ರಾಜ್ಯಗಳು ತನ್ನದೇ ಆದ ಪಟ್ಟಿಹೊಂದಿದ್ದು, ಕೇಂದ್ರ ಕೂಡಾ ತನ್ನದೇ ಆದ ಪಟ್ಟಿ ಹೊಂದಿದೆ. ಕೇಂದ್ರಸರ್ಕಾರದಲ್ಲಿ ಹೊಂದಿರುವ ಅಥವಾ ಪಟ್ಟಿಯಲ್ಲಿ ಇರದ ಜಾತಿಗಳ ಬಗ್ಗೆ ಮಾತ್ರ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಲಿದೆ ಎಂದು ತಿಳಿಸಿದರು.