ಪೋಷಕರಿಗೆ ಅಗೌರವ ತೋರುವ ಜನರಿಗೆ ಮಾದರಿಯಾದ ಆಧುನಿಕ ಶ್ರವಣಕುಮಾರರು! 
ದೇಶ

ಪೋಷಕರಿಗೆ ಅಗೌರವ ತೋರುವ ಜನರಿಗೆ ಮಾದರಿಯಾದ ಆಧುನಿಕ ಶ್ರವಣಕುಮಾರರು!

ಹೆತ್ತು ಹೊತ್ತ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡದೆ, ಅಗೌರವದಿಂದ ನೋಡುವ ಜನರಿಗೆ ಈ ಆಧುನಿಕ ಶ್ರವಣ ಕುಮಾರರು ಮಾದರಿಯಾಗಿದ್ದಾರೆ...

ನವದೆಹಲಿ: ಹೆತ್ತು ಹೊತ್ತ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡದೆ, ಅಗೌರವದಿಂದ ನೋಡುವ ಜನರಿಗೆ ಈ ಆಧುನಿಕ ಶ್ರವಣ ಕುಮಾರರು ಮಾದರಿಯಾಗಿದ್ದಾರೆ. 
ಜನ್ಮ ನೀಡಿದ ಪೋಷಕರನ್ನು ಬುಟ್ಟಿಯಲ್ಲಿಟ್ಟು, ಒಬ್ಬನೇ ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದ ಶ್ರವಣನ ಭಕ್ತಿ ಎಲ್ಲರಿಗೂ ಗೊತ್ತಿರುವ ಕಥೆಯಾಗಿದೆ. ತಂದೆ-ತಾಯಿಯ ಮೇಲೆ ಆತನಿಗಿದ್ದ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂಬುದನ್ನು ಪೌರಾಣಿಕ ಕಥೆಯಲ್ಲಿವೆ. 
ಇದರಂತೆಯೇ ಹರಿಯಾಣ ಮೂಲದ ನಾಲ್ವರು ಸಹೋದರರು ತಮ್ಮ ಪೋಷಕರನ್ನು ಹರಿಯಾಣದ ಪಲ್ವಾಲದಿಂದ ಹರಿದ್ವಾರದ ಮಾನಸದೇವಿವರೆಗೆ ಹೊತ್ತುಕೊಂಡು ಹೋಗಿ  ಮಾತಾ-ಪಿತೃ ಪ್ರೇಮ ಸಾರುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಪೋಷಕರೆಂದರೆ ಅಗೌರವ ತೋರುವ ಜನರಿಗೆ ಮಾದರಿಯಾಗಿದ್ದಾರೆ. 
ಪೌರಾಣಿಕ ಕಥೆಯಲ್ಲಿ ಶ್ರವಣನ ತಂದೆ ಹಾಗೂ ಅಸಹಾಯಕರೆಂದು ಹೇಳಲಾಗಿದೆ. ಆದರೆ, ಇಲ್ಲಿ ಮಾದರಿಯಾಗಿರುವ ಸಹೋದರರ ಪೋಷಕರನೇರು ಅಸಹಾಯರೇನೂ ಅಲ್ಲ. ನಡೆದಾಡಲು ಶಕ್ತರಾಗಿದ್ದರೂ ಕೂಡ ಪೋಷಕರ ಹಾಗೂ ಮಕ್ಕಳ ಪ್ರೀತಿ ಎಂತಹದ್ದು ಎಂಬುದನ್ನು ಸಾರಲು ಈ ರೀತಿಯ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ. 
ಶ್ರವಣ ಕುಮಾರನ ಪೋಷಕರಂತೆ ನಮಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಆದರೆ, ಪೋಷಕರನ್ನು ಅಗೌರವದಿಂದ ನೋಡುವವರಿಗೆ ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪೋಷಕರು ಹೇಳಿದ್ದಾರೆ. 
ಪೋಷಕರ ಪ್ರಾಮುಖ್ಯತೆ ಏನು ಎಂಬುದು ಜನರಿಗೆ ಮನದಟ್ಟು ಮಾಡುವ ಸಲುವಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಯಿತು ಮಹೆಂದರ್ ಹೇಳಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರನ್ನು ಅತ್ಯಂತ ಕೆಟ್ಟದಾಗಿ ನೋಡುತ್ತಿದ್ದಾರೆ. ನೆರೆಮನೆಯವರು ತಮ್ಮ ಪೋಷಕರನ್ನು ಹೀನಾಯವಾಗಿ ನೋಡುತ್ತಿದ್ದುದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ಇತರರಿಗೆ ಉದಾಹರಣೆಯಾಗಲಿ ಎಂದು ಈ ನಿರ್ಧಾರ ಕೈಗೊಂಡೆವು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT