ಕರುಣಾನಿಧಿ ಕಪ್ಪು ಕನ್ನಡಕದ ರಹಸ್ಯವೇನು ಗೊತ್ತಾ? 
ದೇಶ

ಕರುಣಾನಿಧಿ ಕಪ್ಪು ಕನ್ನಡಕದ ರಹಸ್ಯವೇನು ಗೊತ್ತಾ?

ಕಪ್ಪು ಕನ್ನಡಕ, ಪಂಚೆ, ಹಳದಿ ಟವೆಲ್ ಡಿಎಂಕೆ ಅಧಿನಾಯನ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಗಳಾಗಿವೆ. ಕಪ್ಪು ಕನ್ನಡಕವಿಲ್ಲದೆ ಕರುಣಾನಿಧಿಯವರನ್ನು ಊಹಿಸಲೂ ಸಾಧ್ಯವಿಲ್ಲ. ಈ ಕನ್ನಡಕದ ಹಿಂದೆ ಇರುವ ರಹಸ್ಯವೇನು ಗೊತ್ತಾ?...

ಚೆನ್ನೈ: ಕಪ್ಪು ಕನ್ನಡಕ, ಪಂಚೆ, ಹಳದಿ ಟವೆಲ್ ಡಿಎಂಕೆ ಅಧಿನಾಯನ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಗಳಾಗಿವೆ. ಕಪ್ಪು ಕನ್ನಡಕವಿಲ್ಲದೆ ಕರುಣಾನಿಧಿಯವರನ್ನು ಊಹಿಸಲೂ ಸಾಧ್ಯವಿಲ್ಲ. ಈ ಕನ್ನಡಕದ ಹಿಂದೆ ಇರುವ ರಹಸ್ಯವೇನು ಗೊತ್ತಾ?......
ಕರುಣಾನಿಧಿಯವರ ಕಪ್ಪು ಕನ್ನಡಕದ ಹಿಂದೆ ರೋಚಕ ಕತೆಯೇ ಇದೆ. ಕರುಣಾನಿಧಿಯವರು ಬರೋಬ್ಬರಿ 46 ವರ್ಷಗಳ ಕಾಲ ಒಂದೇ ಚಾಳೀಸು ಬಳಸಿದ್ದರು. ಕಳೆದ ವರ್ಷ ನವೆಂಬರ್ ನಲ್ಲಷ್ಟೇ ಅದನ್ನು ಬದಲಿಸಿದ್ದರು. 
ಹೊಸ ಕನ್ನಡಕ ಹುಡುಕಲು ಕರುಣಾನಿಧಿಯವರ ಪುತ್ರ ತಮಿಳರಸು ಅವರು ಸುಮಾರು 40 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದರು. ಜರ್ಮನಿಯಿಂದ ಹಗುರ ಹೊಸ ಕನ್ನಡಕ ತರಿಸಿ, ತಂದೆಗೆ ನೀಡಿದ್ದರು. ಕರುಣಾನಿಧಿ ತುಂಬಾ ಖುಷಿಪಟ್ಟಿದ್ದರು. 
ಕರುಣಾನಿಧಿಯವರು ಯಾವಾಗಲು ಕಪ್ಪು ಕನ್ನಡಕ ಧರಿಸುತ್ತಿದ್ದದ್ದು ಏಕೆ ಎಂಬುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಅದಕ್ಕೆ ಕಾರಣ ಅವರಿಗಿದ್ದ ಕಣ್ಣಿನ ಸಮಸ್ಯೆ ಹಾಗೂ ಅಪಘಾತದಲ್ಲಿ ಉಲ್ಬಣಗೊಂಡಿದ್ದ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆ. 
1954ರಿಂದ ಕರುಣಾನಿಧಿಯವರ ಕಣ್ಣಿನಲ್ಲಿ ನೀರು ಸುರಿಯುವುದು, ತುರಿಕೆ, ನೋವು ಕಾಣಿಸಿಕೊಳ್ಳುತ್ತಿತ್ತು. 17 ವರ್ಷಗಳ ಕಾಲ ಅದನ್ನು ಸಹಿಸಿಕೊಂಡಿದ್ದರು. ಕೊನೆಕೊನೆಗೆ ಕಣ್ಣನಲ್ಲಿ ಸೂಜಿ ಚುಚ್ಚಿದ ಅನುಭವದಿಂದ ತತ್ತರಿಸಿದ್ದರು. ಯಾವ ವೈದ್ಯರ ಬಳಿ ಹೋದರೂ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ. 
ಈ ನಡುವೆ 1967ರಲ್ಲಿ ಸಂಭವಿಸಿದ ಒಂದು ಅಪಘಾತದಲ್ಲಿ ಕರುಣಾನಿಧಿಯವರ ಕಣ್ಣಿಗೆ ಗಾಯವಾಗಿತ್ತು. ಕಣ್ಣಿನ ಸಮಸ್ಯೆ ಸಹಿಸಲು ಅಸಾಧ್ಯವಾದಾಗ ಅಮೆರಿಕಾದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಅಂದಿನಿಂದಲೂ ಅವರು ಕಪ್ಪು ಕನ್ನಡಕವನ್ನು ಬಳಸುತ್ತಿದ್ದರು. 
ಕರುಣಾನಿಧಿಯವರ ಒಂದು ಕಾಲದ ಮಿತ್ರ, ರಾಜಕೀಯ ಎದುರಾಳಿಯಾಗಿದ್ದ ಎಂಜಿಆರ್ ಕೂಡ ಕಪ್ಪು ಕನ್ನಡಕ ಧರಿಸುತ್ತಿದ್ದರು. ವಿಶೇಷ ಟೋಪಿಯೂ ಅವರ ಟ್ರೇಡ್ ಮಾರ್ಕ್ ಆಗಿತ್ತು. ಎಂಜಿಆರ್ ನಿಧನರಾಗಾದ ಅವರ ಕನ್ನಡಕ, ಟೋಪಿಯನ್ನು ಜೊತೆಯಲ್ಲಿಯೇ ಹೂಳಲಾಗಿದ್ದು. ಇವರಿಬ್ಬರಿಂದಾಗಿ ತಮಿಳುನಾಡಿನಲ್ಲಿ ಕಪ್ಪು ಕನ್ನಡಕ ಧರಿಸುವ ಕ್ರೇಜ್ ಕೂಡ ಸೃಷ್ಟಿಯಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT