ದೇಶ

ಕೇರಳ ಪ್ರವಾಹಕ್ಕೆ 26 ಜನರು ಬಲಿ : ಎಲ್ಲಾ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ಮೋದಿ ಹೇಳಿಕೆ

Nagaraja AB

ನವದೆಹಲಿ: ಕೇರಳದಲ್ಲಿನ ಪ್ರವಾಹದಿಂದಾಗಿ  ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿಕೆ ಆಗಿದ್ದು, ಎಲ್ಲಾ ಅಗತ್ಯ ನೆರವು ಒದಗಿಸುವುದಾಗಿ ಪ್ರಧಾನಿ ನರೇಂದ್ರಮೋದಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಹೇಳಿದ್ದಾರೆ.

ಕೇರಳದಲ್ಲಿನ ಪ್ರವಾಹ ಕುರಿತು ಪಿಣರಾಯ್ ವಿಜಯ್ ಜೊತೆಗೆ ಮಾತುಕತೆ ನಡೆಸಿದ್ದು, ದುರಂತದ ಹಿನ್ನೆಲೆಯಲ್ಲಿ ಕೇರಳ ಜನರ ಭುಜದೊಂದಿಗೆ ಭುಜ ಕೊಡುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.
 ದೆಹಲಿಯಲ್ಲಿರುವ ಎನ್ ಡಿಆರ್ ಎಫ್ ಸಹಾಯವಾಣಿ  ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ಕೇರಳದ ಪರವೂರ್ , ಕುನ್ನತುನಾಡ್,  ಕೊತ್ತಮಂಗಲಂ ತಾಲೂಕ್ ಗಳಲ್ಲಿ ಶಾಲಾ, ಕಾಲೇಜುಗಳಿಗೆ ಇಂದು ಜಿಲ್ಲಾಡಳಿತ ರಜೆ ಘೋಷಿಸಿದೆ. ಸೇನೆ ಕೂಡಾ 75 ಸಿಬ್ಬಂದಿಯನ್ನೊಳಗೊಂಡ ಮೂರು ತಂಡಗಳನ್ನು  ವೈನಾಡು, ಇಡುಕಿ ಮತ್ತಿತರ ಕಡೆಗಳಲ್ಲಿ ನಿಯೋಜಿಸಿದೆ.
ಇಡುಕಿ ಜಲಾಶಯ 26 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭರ್ತಿಯಾಗಿದ್ದು,  ನಿನ್ನೆಯಿಂದ ನೀರನ್ನು ಹೊರಬಿಡಲಾಗುತ್ತಿದ್ದು, ಕೇರಳ ವಿದ್ಯುತ್ ಮಂಡಳಿ ಜಲಾಶಯದ ತಗ್ಗುಪ್ರದೇಶದಲ್ಲಿನ ಜನರಿಗೆ  ಎಚ್ಚರಿಕೆ ನೀಡಿದೆ
SCROLL FOR NEXT