ಹರಿವಂಶ್, ಬಿ. ಕೆ. ಹರಿಪ್ರಸಾದ್ 
ದೇಶ

ರಾಜ್ಯಸಭಾ ಉಪಸಭಾಪತಿ ಚುನಾವಣೆ : ಬಿ. ಕೆ. ಹರಿಪ್ರಸಾದ್ , ಹರಿವಂಶ್ ನಡುವೆ ಪೈಪೋಟಿ

ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಇಂದು ನಡೆಯಲಿರುವ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಹರಿವಂಶ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಬಿ. ಕೆ. ಹರಿ ಪ್ರಸಾದ್ ಕಣಕ್ಕೆ ಇಳಿದಿದ್ದಾರೆ.

ನವದೆಹಲಿ: ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ  ಇಂದು ನಡೆಯಲಿರುವ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ  ಹರಿವಂಶ್  ಹಾಗೂ ಪ್ರತಿಪಕ್ಷಗಳ  ಅಭ್ಯರ್ಥಿಯಾಗಿ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಬಿ. ಕೆ. ಹರಿ ಪ್ರಸಾದ್ ಕಣಕ್ಕೆ ಇಳಿದಿದ್ದಾರೆ.

244 ಸದಸ್ಯರನ್ನು ಹೊಂದಿರುವ ರಾಜ್ಯಸಭೆಯಲ್ಲಿ ಆಡಳಿತರೂಢಾ ಎನ್ ಡಿಎ ಮೈತ್ರಿಕೂಟದ 126 ಸದಸ್ಯರನ್ನು ಹೊಂದಿದೆ.

ಹರಿವಂಶ ಜೆಡಿಯುನಿಂದ ಮೊದಲ ಬಾರಿಗೆ ರಾಜ್ಯಸಭೆ ಸಂಸದರಾಗಿದ್ದರೆ, ಹರಿಪ್ರಸಾದ್ ಮೂರು ಬಾರಿ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಪಿ. ಕೆ. ಕುರಿಯನ್ ಅವರ ನಿವೃತ್ತಿಯಿಂದಾಗಿ  ಜುಲೈ 1 ರಿಂದ ತೆರವಾಗಿರುವ ಸ್ಥಾನಕ್ಕೆ ಬೆಳಿಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದೆ.

 ಪ್ರತಿಪಕ್ಷಗಳ ಕೂಟದಲ್ಲಿ  ಕಾಂಗ್ರೆಸ್ ಸೇರಿದಂತೆ ಟಿಎಂಸಿ, ಡಿಎಂಕೆ, ಎಡಪಕ್ಷ, ಎಸ್ ಪಿ, ಬಿಎಸ್ ಪಿ, ಎನ್ ಸಿಪಿ ಮತ್ತು ಟಿಡಿಪಿ ಪಕ್ಷಗಳಿವೆ. ಹರಿಪ್ರಸಾದ್ ಗೆ ಬೆಂಬಲ ನೀಡುವುದಾಗಿ ಟಿಡಿಪಿ ಮುಖಂಡ ವೈ. ಎಸ್. ಚೌದರಿ ತಿಳಿಸಿದ್ದಾರೆ.

ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗೆ  ಶಿವಸೇನಾ, ಅಕಾಲಿ ದಳ, ಎಎಐಡಿಎಂಕೆ ಮತ್ತು ಟಿಆರ್ ಎಸ್  ಬೆಂಬಲ ಘೋಷಿಸಿವೆ.

ಒಟ್ಟಾರೇ ಇಂದು ನಡೆಯಲಿರುವ ಚುನಾವಣೆ  ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್  ರಾಜಕೀಯ ಜೀವನದಲ್ಲಿ ಮಹತ್ವದ್ದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ