ದೇಶ

ನೆಹರೂ ಅವರದ್ದು 'ಸ್ವಾರ್ಥ ಸ್ವಭಾವ' ಹೇಳಿಕೆಗೆ ದಲೈ ಲಾಮಾ ಕ್ಷಮೆಯಾಚನೆ!

Vishwanath S
ನವದೆಹಲಿ: ಮಾಜಿ ಪ್ರಧಾನಿ, ದಿವಂಗತ ಪಂಡಿತ್ ಜವಾಹರ್ ಲಾಲ್ ನೆಹರೂ ಅವರದ್ದು ಸ್ವಯಂ ಕೇಂದ್ರಿತ ವರ್ತನೆ ಎಂದು ಹೇಳಿಕೆ ನೀಡಿದ್ದ ಟಿಬೆಟ್ ನ ಧಾರ್ಮಿಕ ಗುರು ದಲೈ ಲಾಮಾ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. 
ನನ್ನ ಹೇಳಿಕೆ ವಿವಾದ ಸೃಷ್ಟಿಸಿದ್ದರೆ ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ದಲೈ ಲಾಮಾ ಹೇಳಿದ್ದಾರೆ. 
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರಿಗೆ ಜವಾಹರ್ ಲಾಲ್ ನೆಹರೂ ಬದಲಿಗೆ ಮೊಹಮ್ಮದ್ ಜಿನ್ನಾ ಅವರು ಪ್ರಧಾನಿ ಆಗಬೇಕೆಂಬುದು ಅವರ ಇಷ್ಟವಾಗಿತ್ತು. ಆದರೆ ನೆಹರೂ ಅವರಿಗೆ ತಾನು ಪ್ರಧಾನಿ ಆಗಬೇಕೆಂಬ ಇಚ್ಛೆ ಹೊಂದಿದ್ದರು ಎಂದು ದಲೈ ಲಾಮಾ ಹೇಳಿದ್ದರು. 
ನೆಹರೂ ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯಾಗಿದ್ದರು. ಅವರಿಗೆ ಸ್ಪಲ್ಪ ಮಟ್ಟಿಗಿನ ಸ್ವಯಂ ಕೇಂದ್ರಿತ ವರ್ತನೆ ಇತ್ತು ಎಂದು ಗೋವಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ದಲೈ ಲಾಮಾ ಹೇಳಿದ್ದರು.
SCROLL FOR NEXT