ದೇಶ

ಅಕ್ರಮ ಹಣ ವರ್ಗಾವಣೆ; ಪತ್ರಕರ್ತ ಉಪೇಂದ್ರ ರೈ ವಿರುದ್ಧ ಇಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ

Sumana Upadhyaya

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ಉಪೇಂದ್ರ ರೈ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಿರುವ ದೆಹಲಿ ನ್ಯಾಯಾಲಯ, ಬೆದರಿಕೆ ಮತ್ತು ವಂಚನೆ ಮಾಡಿ ಪಡೆದುಕೊಂಡ ಆಸ್ತಿಗಳನ್ನು ಕಳಂಕರಹಿತ ಎಂದು ತೋರಿಸಿದ್ದಾರೆ ಎಂದು ಆರೋಪಿಸಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ಕೆ ಮಟ್ಟಾ ಮತ್ತು ನಿತೀಶ್ ರಾಣಾ ಸಲ್ಲಿಸಿದ್ದ ಆರೋಪವನ್ನು ದಾಖಲಿಸಿಕೊಂಡ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಕುಲಶ್ರೇಷ್ಟ ದಾಖಲೆಗಳ ಪರಿಶೀಲನೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.

ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ದೆಹಲಿ ಮೂಲದ ಪತ್ರಕರ್ತ ಉಪೇಂದ್ರ ರೈ ಅವರನ್ನು ಬಂಧಿಸಿತ್ತು. ಆರೋಪಪಟ್ಟಿಯ ಪ್ರತಿಯೊಂದನ್ನು ಮತ್ತು ಇತರ ದಾಖಲೆಗಳನ್ನು ಉಪೇಂದ್ರ ರೈಗೆ ಸಹ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಕೋರ್ಟ್ ಆದೇಶ ನೀಡಿದೆ.

ಆಗಸ್ಟ್ 6ರಂದು ನ್ಯಾಯವಾದಿ ಎ ಆರ್ ಆದಿತ್ಯ ಮೂಲಕ ಆರೋಪಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ, ಮಾಧ್ಯಮ ಪ್ರತಿನಿಧಿಯಾಗಿ ತನ್ನ ಪ್ರಭಾವ ಬಳಸಿಕೊಂಡು ಸರ್ಕಾರಿ ಕಚೇರಿಗಳ ಅಧಿಕಾರಿಗಳ ಮೇಲೆ ಹತೋಟಿ ಹೊಂದಿದ್ದರು, ಅಲ್ಲದೆ ರಹಸ್ಯ ಮಾಹಿತಿಗಳನ್ನು ಸರ್ಕಾರಿ ಅಧಿಕಾರಿಗಳಿಂದ ಪಡೆಯುತ್ತಿದ್ದರು, ಆ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಯೋಜನೆ ರೂಪಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಪಟ್ಟಿಯಲ್ಲಿ ದಾಖಲಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೂನ್ 8ರಂದು ಜಾರಿ ನಿರ್ದೇಶನಾಲಯ ಉಪೇಂದ್ರ ರೈಯನ್ನು ತಿಹಾರ್ ಜೈಲಿನಲ್ಲಿ ಬಂಧಿಸಿತ್ತು. ಇದಕ್ಕೂ ಮುನ್ನ ಅವರು ಅಕ್ರಮವಾಗಿ ಹಣ ಸುಲಿಗೆ ಮತ್ತು ಹಣಕಾಸು ವಹಿವಾಟುಗಳಿಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆಯಲ್ಲಿ ಜಾಮೀನು ಪಡೆದಿದ್ದರು.

SCROLL FOR NEXT