ದೇಶ

ಇಮ್ರಾನ್ ಖಾನ್ ಪ್ರಮಾಣ ವಚನ; ಗವಾಸ್ಕರ್ ಗೈರು, ಸಿದು ಹಾಜರಿ, ಕಪಿಲ್ ದೇವ್ ನಿರ್ಧಾರ ಅಸ್ಪಷ್ಟ

Srinivasamurthy VN
ನವದೆಹಲಿ: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮಕ್ಕೆ ಭಾರತದ ಕ್ರಿಕೆಟ್ ದಂತಕಥೆಗಳಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿದುಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.
ಇದೇ ಆಗಸ್ಟ್ 18ರಂದು ಪಿಟಿಐ ಪಕ್ಷ ಸಂಸ್ಥಾಪಕ ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಪಾಕಿಸ್ತಾನ ಪ್ರಧಾನಿ ಕಚೇರಿ ಇಂದು ಅಧಿಕೃತವಾಗಿ ಭಾರತದ ಕ್ರಿಕೆಟ್ ದಂತಕಥೆಗಳಿಗೆ ಆಹ್ವಾನ ನೀಡಿದೆ. ಇನ್ನು ಈ ಪೈಕಿ ನವಜೋತ್ ಸಿಂಗ್ ಸಿಧು ತಾವು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವುದಾಗಿ ಹೇಳಿಕೆ ನೀಡಿದ್ದಾರೆ.
ಇನ್ನು ಸುನಿಲ್ ಗವಾಸ್ಕರ್ ಅವರು ಇಮ್ರಾನ್ ಖಾನ್ ಆಹ್ವಾನವನ್ನು ತಿರಸ್ಕರಿಸಿದ್ದು, ಪ್ರಮಾಣ ವಚನ ಸ್ವೀಕಾರಕ್ಕೆ ತೆರಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿ ಶುಭ ಕೋರಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ಓರ್ವ ಕ್ರಿಕೆಟಿಗನಾಗಿ ಇಮ್ರಾನ್ ಖಾನ್ ಸಾಕಷ್ಟು ಬಾರಿ ಭಾರತಕ್ಕೆ ಬಂದಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಅವರು ಚೆನ್ನಾಗಿಯೇ ತಿಳಿದಿದ್ದಾರೆ ಎಂಬುದು ನನ್ನ ಭಾವನೆ. ಹೀಗಾಗಿ ಅವರ ಕಾರ್ಯಲೈಖರಿ ಕುರಿತು ನಾನು ಸಾಕಷ್ಚು ನಿರೀಕ್ಷೆ ಇರಿಸಿದ್ದೇನೆ ಎಂದು ಹೇಳಿದ್ದಾರೆ.
ಇತ್ತ ಕಪಿಲ್ ದೇವ್ ಅವರ ನಿರ್ಧಾರ ಮಾತ್ರ ಇನ್ನೂ ತಿಳಿದುಬಂದಿಲ್ಲ. 
SCROLL FOR NEXT