ಶ್ರೀನಗರ: ತನ್ನ ಜೀವಿತದ ಅಂತ್ಯದವರೆಗೂ ಆರ್ಟಿಕಲ್ 35-ಎ ರಕ್ಷಣೆಗಾಗಿ ಹೋರಾಡುತ್ತೇನೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಜನರಿಗೆ ವಿಶೇಷ ಹಕ್ಕುಗಳು ಮತ್ತು ಸೌಲಭ್ಯಗಳನ್ನು ನೀಡುವ ಆರ್ಟಿಕಲ್ 35-ಎ, ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
"ನಾನು ನನ್ನ ಕಡೆಯುಸಿರು ಇರುವವರೆಗೆ, ನನ್ನ ಸಮಾಧಿಯಾಗುವವರೆಗೆ ನೀಡುವ ಆರ್ಟಿಕಲ್ 35-ಎ ರಕ್ಷಣೆಗಾಗಿ ಹೋರಾಡುತ್ತೇನೆ." ಎಂದು ಅಬ್ದುಲ್ಲಾ ಹೇಳಿದ್ದಾರೆ.ಅಲ್ಲದೆ ಕಾಶ್ಮೀರ ವಿಶೇಷ ಸ್ಥಾನಮಾನವನ್ನು ವಿರೋಧಿಸುತ್ತಿರುವವರು ಕೇವಲ ಕಾಶ್ಮೀರವನ್ನು ಮಾತ್ರವೇ ಗಮನಿಸುತ್ತಿದ್ದಾರೆ, ಆದರೆ ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಸಹ ವಿಶೇಷ ಸ್ಥಾನಮಾನ ಅನುಭವಿಸುತ್ತಿದೆ. ಇದರ ಕುರಿತು ಯಾರೂ ಮಾತನಾಡುತ್ತಿಲ್ಲ. ಎಂದರು.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದು ಹಾಕಿದ್ದಾದರೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಬಹಳ ಕಠಿಣವಾಗಲಿದೆ ಎಂದ ಅಬ್ದುಲ್ಲಾ "ನೀವು ಪರಿಸ್ಥಿತಿಯನ್ನು ಗಮನಿಸಲಿದ್ದೀರಿ, ದೆಹಲಿಯು (ಕೇಂದ್ರ ಸರ್ಕಾರ) ಸಹ ಅದನ್ನು ನಿಯಂತ್ರಿಸುವುದು ಕಠಿಣವಾಗಲಿದೆ" ಎಂದರು.
ಶ್ರೀನಗರ ಕ್ಷೇತ್ರದ ಸಂಸತ್ ಸದಸ್ಯರಾಗಿರುವ ಅಬ್ದುಲ್ಲಾ ಸಂವಿಧಾನದ ಆರ್ಟಿಕಲ್ 35-ಎ ಕುರಿತಂತೆ ""ಅವರು (ಆರ್ಟಿಕಲ್) 35-ಎ ಸ್ಪರ್ಶಿಸಲು ಸಾಧ್ಯವಿಲ್ಲ.ಸಂವಿಧಾನಾತ್ಮಕ ಪೀಠವು ಈಗಾಗಲೇ ಅದರ ಬಗ್ಗೆ ಎರಡು ಬಾರಿ ಹೇಳಿದೆ.ಅವರು ಏಕೆ ಈ ಗಾಯವನ್ನು ಕೆರೆದು ದೊಡ್ಡದಾಗಿಸಲು ಬಯಸುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ. ಹೆಚ್ಚು ಕೆದಕಿದಂತೆ ಹೆಚ್ಚು ರಕ್ತ ಒಸರುತ್ತದೆ. ಈಗ ಈ ಗಾಯವನ್ನು ಕೆದರುವ ಕೆಲಸವನ್ನು ನಿಲ್ಲಿಸಬೇಕಾದ ಸಮಯ ಒದಗಿದೆ" ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos