ನವ ದೆಹಲಿ :ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ಯಾಟಿಂಗ್ ನಡೆಸಿದ್ದಾರೆ.
ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ವೆಚ್ಚವನ್ನು ಪರಿಶೀಲಿಸುತ್ತದೆ ಮತ್ತು ವರ್ಷದುದ್ದಕ್ಕೂ ರಾಷ್ಟ್ರವು ಚುನಾವಣಾ ಮನಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಕಾನೂನು ಆಯೋಗಕ್ಕೆ ಪತ್ರ ಬರೆದಿರುವ ಅಮಿತ್ ಶಾ, ಏಕಕಾಲಿಕ ಚುನಾವಣೆ ಒಂದು ಕಲ್ಪನೆ ಅಲ್ಲ , ಅದು ಒಂದು ಸಿದ್ದಾಂತವಾಗಿ ಅನುಷ್ಠಾನಕ್ಕೆ ಬರಬೇಕು ಎಂದಿದ್ದಾರೆ.