ದೇಶ

ತ್ರಿವಳಿ ತಲಾಕ್ ಸಂವಿಧಾನ ಬಾಹಿರ, ನಿಷೇಧ ಕಾನೂನು ಸ್ವಾಗತಾರ್ಹ: ಶಬಾನಾ ಅಜ್ಮಿ

Raghavendra Adiga
ಜೌನ್ಪುರ್(ಉತ್ತರ ಪ್ರದೇಶ): ತ್ರಿವಳಿ ತಾಲಾಖ್ ಭಾರತೀಯ ಸಂವಿಧಾನದ ವಿರುದ್ಧ ಮತ್ತು ಪ್ರಸ್ತಾಪಿತ ಕಾನೂನು ಸ್ವಾಗತಾರ್ಹವಾಗಿದ್ದು ಇದರಿಂದಾಗಿ ತ್ವರಿತ ವಿಚ್ಚೇದನವ ಕಾನೂನು ಬಾಹಿರ ಎನಿಸಿಕೊಳ್ಳಲಿದೆ ಎಂದು ಖ್ಯಾತ ಚಲನಚಿತ್ರ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ.
ಜೌನ್ಪುರದಲ್ಲಿನ ಮಹಮ್ಮದ್ ಹಸನ್ ಇಂಟರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.
"ತ್ರಿವಳಿ ತಲಾಕ್ ಮುಸ್ಲಿಮ್ ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯವಾಗಿದ್ದು ಇದು ಭಾರತೀಯ ಸಂವಿಧಾನದ ವಿರುದ್ಧವಾಗಿದೆ ... ಈ ನಿಟ್ಟಿನಲ್ಲಿ ಸರ್ಕಾರವು ಜಾರಿಗೊಳಿಸಿದ ಕಾನೂನನ್ನು ನಾನು ಸ್ವಾಗತಿಸುತ್ತೇನೆ" ಮಾಜಿ ಸಂಸದ ಶಬಾನಾ ಅಜ್ಮಿ ಹೇಳಿದ್ದಾರೆ.
"ವಿಶ್ವದ 50 ಇಸ್ಲಾಮಿಕ್ ದೇಶಗಳಲ್ಲಿ 24 ರಾಷ್ಟ್ರಗಳು ಇದಾಗಲೇ ತ್ರಿವಳಿ ತಲಾಕ್ ಅನ್ನು ನಿಷೇಧಿಸಿದೆ. ಭಾರತದಲ್ಲಿ ಇದನ್ನು ವಿರೋಧಿಸುತ್ತಿರುವವರು ಇದರ ಕುರಿತಾಗಿ ತಪ್ಪು ತಿಳುವಳಿಕೆ ಹೊಂದಿದ್ದಾರೆ.ಭಾರತವು ಜಾತ್ಯತೀತ ರಾಷ್ಟ್ರ ಮತ್ತು ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ.  ಮಹಿಳೆಯರಿಗೆ ದೌರ್ಜನ್ಯಕ್ಕೆ ಆಸ್ಪದ ನೀಡುವ ಯಾವ ಆಚರಣೆಗಳಿಗೆ ನಾವು ಬೆಂಬಲ ನಿಡುವುದಿಲ್ಲ." ಎಂದು ಅವರು ಹೇಳಿದರು.
ಕಠಿಣ ಕಾನೂನು ಇರುವ ಹೊರತಾಗಿಯೂ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಳವಾಗುತ್ತಿರುವುದರ ಕುರಿತು ಅಜ್ಮಿ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.ಎಂದು ಅವರು ಅಭಿಪ್ರಾಯಪಟ್ಟಿದ್ದು ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸುವ ನಿತ್ಟಿನಲ್ಲಿ ಇಂತಹಾ ಅಪರಾಧವೆಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT