ಲಖನೌ: 2013 ರ ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ವಾಪಸ್ ಪಡೆಯುವ ಸಿಎಂ ಯೋಗಿ ಆದಿತ್ಯನಾಥ್ ಅವರ ನಿರ್ಧಾರಕ್ಕೆ ಮುಜಾಫರ್ ನಗರ ಸ್ಥಳೀಯ ಆಡಳಿತ ತೀವ್ರ ವಿರೋಧ ವ್ಯಕ್ತಪಡಿಸಿದೆ.
ವಿರೋಧಕ್ಕೆ ಆಡಳಿತಾತ್ಮಕ ಕಾರಣ ನೀಡಿರುವ ಮುಜಾಫರ್ ನಗರ ಸ್ಥಳೀಯ ಆಡಳಿತ, ಪ್ರಕರಣಗಳ ಬಗ್ಗೆ ಎಲ್ಲಾ ದೃಷ್ಟಿಯಿಂದಲೂ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ, ಪೊಲೀಸ್ ಹಾಗೂ ಪ್ರಾಸಿಕ್ಯೂಷನ್ ನ ವರದಿಯ ಆಧಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ದೃಷ್ಟಿಕೋನಗಳನ್ನು ಹೇಳಿದ್ದೇವೆ ಎಂದು ಜಿಲ್ಲಾ ದಂಡಾಧಿಕಾರಿ ಹೇಳಿದ್ದಾರೆ.
2013 ರ ಮುಜಾಫರ್ ನಗರ ಹಾಗೂ ಶಾಮ್ಲಿಯಲ್ಲಿ ನಡೆದ ಗಲಭೆ ಪ್ರಕರಣಗಳಲ್ಲಿ ಬಿಜೆಪಿ ನಾಯಕರ ಹೆಸರೂ ಕೇಳಿಬಂದಿತ್ತು.