ಲಖನೌ: ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜಿಸಲು ಉತ್ತರ ಪ್ರದೇಶ ಸಮರ್ಥವಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ನಂದಗೋಪಾಲ್ ಗುಪ್ತ ನಂದಿ ಅವರು ಮಂಗಳವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಸಚಿವ ಅನಂತಕುಮಾರ್ ಅವರು ಏರ್ ಶೋ ಆಯೋಜಿಸಲು ಲಖನೌನಲ್ಲಿ ಮೂಲಸೌಕರ್ಯ ಇಲ್ಲ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಂದಿ, ಉತ್ತರ ಪ್ರದೇಶ ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮಭೂಮಿ. ಇಲ್ಲಿ ಎಲ್ಲಾ ಇದೆ. ಅಂತಹ ಕುಂಭ ಮೇಳವನ್ನೇ ಆಯೋಜಿಸುತ್ತೇವೆ. ಏರ್ ಶೋ ಅನ್ನು ಆಯೋಜಿಸುವ ಸಾಮರ್ಥ್ಯ ಇದೆ ಎಂದರು.
ವರದಿಗಳ ಪ್ರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಂಗಳೂರಿನಲ್ಲಿ ನಡೆಯುವ ಏರ್ ಶೋ ಅನ್ನು ಲಖನೌಗೆ ಸ್ಥಳಾಂತರಿಸುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒತ್ತಾಯಿಸಿದ್ದಾರೆ.
ಇನ್ನು ಏರ್ ಶೋ ಅನ್ನು ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ್ದ ಅನಂತಕುಮಾರ್ ಅವರು, ಲಖನೌನಲ್ಲಿ ಏರ್ ಶೋ ನಡೆಸಲು ಮೂಲ ಸೌಕಯ್ಯ ಇಲ್ಲ ಎಂದು ಈಗಾಗಲೇ ಅಧಿಕಾರಿಗಳೇ ಹೇಳಿದ್ದಾರೆ. ಹೀಗಾಗಿ ಸ್ಥಳಾಂತ ಕೇವಲ ವದಂತಿ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics