ಅಟಲ್ ಬಿಹಾರಿ ವಾಜಪೇಯಿ 
ದೇಶ

ನಾನು ನನ್ನ ತಂದೆಯನ್ನೇ ಕಳೆದುಕೊಂಡಿದ್ದೇನೆ: ಅಟಲ್ ನಿಧನಕ್ಕೆ ಮೋದಿ ಸಂತಾಪ

ಅಟಲ್ ಬಿಹಾರಿ ವಾಜಪೇಯಿ ಖ್ಯಾತ ರಾಜಕೀಯ ಪಟುವಾಗಿದ್ದರು. ಅವರ ಮರಣವು ಒಂದು ಯುಗದ ಅಂತ್, ಇಂದು ಅವರು ನಮ್ಮ ಜತೆ ಇಲ್ಲ, ನಾನು ನನ್ನ ತಂದೆ ಕಳೆದುಕೊಂಡಿದ್ದೇನೆ.

ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಖ್ಯಾತ ರಾಜಕೀಯ ಪಟುವಾಗಿದ್ದರು. ಅವರ ಮರಣವು ಒಂದು ಯುಗದ ಅಂತ್ಯ, ಇಂದು ಅವರು ನಮ್ಮ ಜತೆ ಇಲ್ಲ,  ನಾನು ನನ್ನ ತಂದೆ ಕಳೆದುಕೊಂಡಿದ್ದೇನೆ. ಅವರು ಬಿಟ್ಟು ಹೋದ ಶೂನ್ಯವನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
"ನನಗೆ ಯಾವುದೇ ಮಾತುಗಳು ಬರುತ್ತಿಲ್ಲ, ನಾನೀಗ ಭಾವುಕನಾಗಿದ್ದೇನೆ. ಅವರು ತನ್ನ ಜೀವನದ ಪ್ರತಿ ಕ್ಷಣವನ್ನೂ ದೇಶಕ್ಕೆ ಸಮರ್ಪಿಸಿಕೊಂಡಿದ್ದರು." ಮೋದಿ ಹೇಳಿದ್ದಾರೆ.
 "ನಿಜವಾದ ಭಾರತೀಯ ರಾಜಕಾರಣಿಯಾಗಿದ್ದ ವಾಜಪೇಯಿ ಇನ್ನಿಲ್ಲ ಎನ್ನುವುದನ್ನು ಕೇಳಲು "ಅತ್ಯಂತ ದುಃಖ"ವಾಗುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ಬಡವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.
"ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ತೀವ್ರ ದುಃಖಿತಳಾಗಿದ್ದೇನೆ.ನಮ್ಮ ರಾಷ್ಟ್ರೀಯ ಜೀವನದಲ್ಲಿವಾಜಪೇಯಿ ಅವರು ಅತ್ಯುನ್ನತ ವ್ಯಕ್ತಿಯಾಗಿದ್ದರು.ತನ್ನ ಜೀವನದುದ್ದಕ್ಕೂ ಅವರು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಕಟಿಬದ್ದರಾಗಿದ್ದರು. ತ್ತು ಅವರ ಎಲ್ಲ ಕಾರ್ಯಗಳಲ್ಲಿ ಈ ಬದ್ಧತೆಯನ್ನು ಪ್ರದರ್ಶಿಸಿದರು, ಸಂಸತ್ ಸದಸ್ಯರಾಗಿ, ಸಚಿವ ಸಂಪುಟ ಸಚಿವ ಅಥವಾ ಭಾರತದ ಪ್ರಧಾನಿಯಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ" ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಅವರು ಸ್ನೇಹಜೀವಿ, ಅವರ ಸುತ್ತಲೂ ಅಭಿಮಾನಿಗಳಿರುತ್ತಿದ್ದರು.ವಾಕ್ಚಾತುರ್ಯದಿಂದ  ಎದುರಿಗಿದ್ದವರನ್ನು ಮೋಡಿ ಮಾಡುವ ಕಲೆ ಅವರಲ್ಲಿತ್ತು. ವಾಜಪೇಯಿ ಅವರ "ಮರಣವು ಒಂದು ದೊಡ್ಡ ಅಂತರವನ್ನು ಸೃಷ್ಟಿಸಿದೆ."ನಾನು ನಮ್ಮ ಲಕ್ಷಾಂತರ ಸಹ ಭಾರತೀಯರಂತೆಯೇ ಅವರ ಮರಣಕ್ಕಾಗಿ ಮರುಗುತ್ತೇನೆ.ಅಟಲ್ ಅವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸುತ್ತೇನೆ" ಸೋನಿಯಾ ಹೇಳಿದ್ದಾರೆ.

"ಆಧುನಿಕ ಭಾರತದ ಅತಿ ಎತ್ತರದ ನಾಯಕರು" ಅಟಲ್ ಅವರಾಗಿದ್ದರೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.ನಮ್ಮ ದೇಶವರ ಸೇವೆಗಳನ್ನು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT