ದೇಶ

ಮಧ್ಯ ಪ್ರದೇಶ: ಪ್ರವಾಹಕ್ಕೆ ಸಿಕ್ಕು 11 ಮಂದಿ ಸಾವು,, 30ಕ್ಕೂ ಹೆಚ್ಚು ಜನರು ಅಪಾಯದಲ್ಲಿ!

Raghavendra Adiga
ಗ್ವಾಲಿಯರ್(ಮಧ್ಯ ಪ್ರದೇಶ):ಗ್ವಾಲಿಯರ್ ನ ಶಿವಪುರಿಯಲ್ಲಿನ ಸುಲ್ತಾನ್ ಘರ್ ಜಲಪಾತದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಪ್ರವಾಸಕ್ಕೆ ಆಗಮಿಸಿದ್ದ 11  ಅಣೆಕಟ್ಟೆಯಿಂದ ಹಠಾತ್ತನೇ ನಿರು ಹೊರಬಿಟ್ಟದ್ದರಿಂದ ಧಿಡೀರನೇ ನೀರಿನ ಮಟ್ಟ ಏರಿಕೆಯಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚೌಹಾಣ್ ಈ ಹೇಳಿಕೆ ನಿಡಿದ್ದಾರೆ.
ಏಳು ಜನರನ್ನು ಈಗಾಗಲೇ ರಕ್ಷಿಸಲಾಗಿದೆ, ಸುಮಾರು 30 ರಿಂದ 40 ಜನರು ಅಪಾಯದಲ್ಲಿ ಸ್ಲುಕಿರುವ ವರದಿ ಬಂದಿದೆ. ಅಪಾಯದಲ್ಲಿರುವವರನ್ನು ರಕ್ಷಿಸುವ ಯತ್ನ ನಡೆಯುತ್ತಿದೆ, ನಾನು ರಕ್ಷಣಾ ತಂಡದೊಡನೆ ಸಂಪರ್ಕದಲ್ಲಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಪರಿಸ್ಥಿತಿ ಪರಾಮರ್ಶೆಗಾಗಿ ಸ್ಥಳಕ್ಕೆ ಆಗಮಿಸಿದ್ದಾರೆ.
ಕಾಣೆಯಾದವರನ್ನು ಪತ್ತೆ ಹಚ್ಚಲು ಒಂದು ಹೆಲಿಕಾಪ್ಟರ್ ಅನ್ನು ಬಳಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಮಧ್ಯಪ್ರದೇಶ ಪೊಲೀಸರು ಕೂಡ ಸ್ಥಳದಲ್ಲಿದ್ದಾರೆ
ಸುಲ್ತಾನ್ ಘರ್ ಜಲಪಾತವು ಶಿವಪುರಿಯಲ್ಲಿ ಬಂಡೆಗಳ ಮಧ್ಯೆ ಹರಿಯುವ ಸುಂದರ ಜಲಪಾತವಾಗಿದ್ದು ಜನಪ್ರಿಯ ಪಿಕ್ನಿಕ್ ತಾಣವೆನಿಸಿದೆ.
SCROLL FOR NEXT