ಸೋದರನ ಪುತ್ರಿ ಮಾಲಾ ತಿವಾರಿ ಜೊತೆ ಅಟಲ್ ಬಿಹಾರಿ ವಾಜಪೇಯಿ(ಸಂಗ್ರಹ ಚಿತ್ರ) 
ದೇಶ

'ಸಿನಿಪ್ರಿಯ' ವಾಜಪೇಯಿ ಯವರನ್ನು ಸ್ಮರಿಸಿದ ಸೋದರನ ಮಗಳು ಮಾಲಾ ತಿವಾರಿ

ರಾಜನೀತಿಜ್ಞ ಮತ್ತು ಕವಿಯಾಗಿ ಜನಪ್ರಿಯತೆ ಗಳಿಸಿರುವ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ...

ಭೋಪಾಲ್: ರಾಜನೀತಿಜ್ಞ ಮತ್ತು ಕವಿಯಾಗಿ ಜನಪ್ರಿಯತೆ ಗಳಿಸಿರುವ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಸಿನಿಮಾ ಪ್ರೇಮಿ ಕೂಡ ಆಗಿದ್ದರು.

ವಾಜಪೇಯಿಯವರ 63 ವರ್ಷದ ಸೋದರ ಮಗಳು ಮಾಲಾ ತಿವಾರಿ ತಮ್ಮ ಚಿಕ್ಕಪ್ಪನ ಜೊತೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಗ್ವಾಲಿಯರ್ ನಲ್ಲಿದ್ದಾಗ ನಮ್ಮ ಇಡೀ ಕುಟುಂಬದವರು ಸಿನಿಮಾ ನೋಡುತ್ತಿದ್ದೆವು. ಚಾಚಾಜಿ ಕೂಡ ಸಿನಿಮಾ ಪ್ರಿಯರಾಗಿದ್ದರು. ಹಳೆ ಚಿತ್ರಗೀತೆಗಳನ್ನು ಕೇಳುತ್ತಿದ್ದರು. ನನ್ನ ಪತಿ, ಚಿಕ್ಕಪ್ಪ, ಎಲ್ ಕೆ ಅಡ್ವಾಣಿ ಮತ್ತು ಪ್ರತಿಭಾ ಅಡ್ವಾಣಿಯವರ ಜೊತೆ ನನ್ನ ಮದುವೆ ನಂತರ ಹಲವು ಸಿನಿಮಾಗಳನ್ನು ನೋಡಿದ್ದೇನೆ. 1977-80ರಲ್ಲಿ ಜನತಾ ಸರ್ಕಾರವಿದ್ದಾಗ ಅಡ್ವಾಣಿಯವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು. ಆಗ ನಾವೆಲ್ಲ ಒಟ್ಟಿಗೆ ಹಲವು ಸಿನಿಮಾಗಳನ್ನು ನೋಡಿದ್ದೆವು ಎನ್ನುತ್ತಾರೆ.

ಇಂದೋರ್ ನಲ್ಲಿ ತಮ್ಮ ಮಗನೊಂದಿಗೆ ವಾಸವಾಗಿರುವ ತಿವಾರಿ ವಾಜಪೇಯಿಯವರ ಹಿರಿಯ ಸೋದರ ಸಡ ಬಿಹಾರಿ ವಾಜಪೇಯಿಯವರ ಆರು ಮಂದಿ ಪುತ್ರಿಯರಲ್ಲಿ ಕೊನೆಯವರು. ವಾಜಪೇಯಿಯವರ ಮೂವರು ಸೋದರರು ಮತ್ತು ಇಬ್ಬರು ಸೋದರಿಯರಲ್ಲಿ ಸಡ ಬಿಹಾರಿ ವಾಜಪೇಯಿ ಎರಡನೆಯವರು.

ನಾನು ಜನಿಸಿದ್ದು 1955ರಲ್ಲಿ, ವೈಜಯಂತಿಮಾಲಾ ಅವರ ನಾಗಿನ್ ಸಿನಿಮಾ ಬಿಡುಗಡೆಯಾದ ವರ್ಷ. ಆ ಸಿನಿಮಾದ ಹಾಡು ಕೇಳಿ ನಾನು ಅಳುವುದನ್ನು ನಿಲ್ಲಿಸುತ್ತಿದ್ದೆನಂತೆ, ಹೀಗಾಗಿ ಅಟಲ್ ಚಾಚಾಜಿಯೇ ನನಗೆ ಮಾಲಾ ಎಂದು ಹೆಸರಿಟ್ಟರು.

ತಮ್ಮ ಸೋದರ, ಸೋದರಿಯರ ಮಕ್ಕಳೊಂದಿಗೆ ನಾಗಿನ್, ರಜಿಯಾ ಸುಲ್ತಾನ ಸಿನಿಮಾಗಳನ್ನು ವೀಕ್ಷಿಸಿದ್ದ ವಾಜಪೇಯಿಯವರು 1999ರಲ್ಲಿ ಬಿಡುಗಡೆಯಾದ ಅಮಿರ್ ಖಾನ್ ಅವರ ಸರ್ಫ್ ರೋಷ್ ಸಿನಿಮಾವನ್ನು ಇಷ್ಟಪಟ್ಟಿದ್ದರು. ಸರ್ಫ್ ರೋಷ್ ಸಿನಿಮಾವನ್ನು ತಪ್ಪದೆ ನೋಡು ಎಂದು ಫೋನ್ ನಲ್ಲಿ ಮಾಲಾ ತಿವಾರಿಗೆ ವಾಜಪೇಯಿಯವರು ಹೇಳಿದ್ದರಂತೆ.

ಮಧ್ಯ ಪ್ರದೇಶದ ಬಿಜೆಪಿ ಮಹಿಳಾ ಮೋರ್ಚದ ಕಾರ್ಯಕಾರಿಣಿಯಾಗಿ ಸೇವೆ ಸಲ್ಲಿಸಿದ್ದ ಮಾಲಾ ತಿವಾರಿ ವಾಜಪೇಯಿಯವರು ತಮ್ಮ ಕುಟುಂಬದರಿಗೆಲ್ಲಾ ಆದರ್ಶಪ್ರಾಯ ಮತ್ತು ಅನುಕರಣೀಯವಾಗಿದ್ದರು. ಮಾರ್ಗದರ್ಶಕರಾಗಿದ್ದರು ಎನ್ನುತ್ತಾರೆ.

ನೀನು ಸರ್ಕಾರದ ಯಾವುದೇ ಹುದ್ದೆಗಳಿಗೆ ಸೇರಲು ಪ್ರಯತ್ನಿಸುವುದಿದ್ದರೂ ನನ್ನ ಹೆಸರನ್ನು ಬಳಸಿ ಶಿಫಾರಸು ಮಾಡಬೇಡ, ನಿನ್ನ ಸಾಮರ್ಥ್ಯದಿಂದ ಮುಂದೆ ಬಾ ಎನ್ನುತ್ತಿದ್ದರಂತೆ ವಾಜಪೇಯಿಯವರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್