ದೇಶ

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಯ್ಕೆ

Lingaraj Badiger
ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿ(ಸಂಸತ್ತು)ಗೆ ಹೊಸದಾಗಿ ಚುನಾಯಿತರಾಗಿರುವ ಸದಸ್ಯರು ಇಂದು ನೂತನ ಪ್ರಧಾನಿಯನ್ನಾಗಿ ಇಮ್ರಾನ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರು 176 ಸದಸ್ಯರ ಮತಗಳನ್ನು ಪಡೆಯುವ ಮೂಲಕ ಪಾಕ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಅವರ ಪ್ರತಿಸ್ಪರ್ಧಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ನ ಶೆಹಭಜ್ ಷರೀಫ್ ಅವರು ಕೇವಲ 96 ಮತಗಳನ್ನು ಪಡೆದರು ಎಂದು ಡಾನ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 172. ಆದರೆ ಕಳೆದ ಜುಲೈ 25ರಂದು ನಡೆದ ಸಾರ್ವತಿಕ್ರ ಚುನಾವಣೆಯಲ್ಲಿ ಪಿಟಿಐ 116 ಸ್ಥಾನಗಳನ್ನು ಪಡೆದಿದ್ದು, ಮಹಿಳಾ ಮತ್ತು ಅಲ್ಪ ಸಂಖ್ಯಾತ ಮೀಸಲು ಪರಿಶೀಲಿಸಿದ ಬಳಿಕ ಪಿಟಿಐ ನ್ಯಾಷನಲ್‌ ಅಸೆಂಬ್ಲಿಯಲ್ಲಿ 158 ಸ್ಥಾನ ಹೊಂದಿದೆ ಎಂದು ಆಗಸ್ಟ್ 11ರಂದು  ಪಾಕಿಸ್ತಾನ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿತ್ತು.
SCROLL FOR NEXT