ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಕಳೇಬರ 
ದೇಶ

ಅಟಲ್ ಜೀ ಅಂತಿಮ ಯಾತ್ರೆ; ನೆರೆಯ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳ ಆಗಮನ

ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ಸರ್ಕಾರಗಳು ತಮ್ಮ ವಿಶೇಷ ...

ನವದೆಹಲಿ: ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ಸರ್ಕಾರಗಳು ತಮ್ಮ ವಿಶೇಷ ಪ್ರತಿನಿಧಿಗಳನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಂತಿಮ ಕಾರ್ಯಕ್ಕೆ ಕಳುಹಿಸಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಅವರು ನಿನ್ನೆ ನಿಧನರಾಗಿದ್ದಾರೆ.

ದೇಶದ 10ನೇ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ಅಂತ್ಯ ಸಂಸ್ಕಾರ ಇಂದು ಅಪರಾಹ್ನ ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಲಿದೆ.

ದು ನ್ಯು ನ್ಯೂಸ್ ವರದಿ ಪ್ರಕಾರ, ವಾಜಪೇಯಿಯವರ ಅಂತಿಮ ಯಾತ್ರೆಯ ಮೆರವಣಿಗೆಗೆ ವಿಶೇಷ ಪ್ರತಿನಿಧಿಯನ್ನು ಕಳುಹಿಸಲು ಪಾಕಿಸ್ತಾನ ಕೂಡ ಮುಂದಾಗಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಹಂಗಾಮಿ ಕಾನೂನು ಮತ್ತು ಮಾಹಿತಿ ಸಚಿವ ಅಲಿ ಝಫರ್ ಭಾಗವಹಿಸುವ ನಿರೀಕ್ಷೆಯಿದೆ.

ಶ್ರೀಲಂಕಾ ಸರ್ಕಾರ ವಿಶೇಷ ಪ್ರತಿನಿಧಿಯನ್ನು ಕಳುಹಿಸುವುದಾಗಿ ಈಗಾಗಲೇ ದೃಢಪಡಿಸಿದೆ. ಅಲ್ಲಿನ ಹಂಗಾಮಿ ವಿದೇಶಾಂಗ ಸಚಿವ ಲಕ್ಷ್ಮಣ್ ಕಿರಿಯೆಲ್ಲ ಆಗಮಿಸಲಿದ್ದಾರೆ. ನೇಪಾಳ ಪ್ರಧಾನಿ ಕೆ ಪಿ ಶರ್ಮ ಅವರ ಪತ್ರಿಕಾ ಸಲಹೆಗಾರ ಕುಂದನ್ ಆರ್ಯಲ್ ಅವರು ಪ್ರತಿಕ್ರಿಯೆ ನೀಡಿ, ಅಲ್ಲಿನ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಇಂದು ವಾಜಪೇಯಿಯವರ ಅಂತಿಮ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಎಚ್ ಮಹ್ಮೂದ್ ಅಲಿ ಆಗಮಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 world cup: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; ಬೆಥೆಲ್ ಶತಕ ವ್ಯರ್ಥ; ಆಂಗ್ಲರ ಮಣಿಸಿದ ಭಾರತ ಫೈನಲ್ಸ್ ಗೆ ಲಗ್ಗೆ

GSDPಯಲ್ಲಿ ಕರ್ನಾಟಕವನ್ನೂ ಮೀರಿಸಿದ ಉತ್ತರ ಪ್ರದೇಶ: ದೇಶದ ಅತಿ ದೊಡ್ಡ ಆರ್ಥಿಕತೆ ಇರುವ ರಾಜ್ಯ ಯಾವುದು?

ಮಧ್ಯಪ್ರಾಚ್ಯ ಸಂಘರ್ಷ: ಅಚ್ಚರಿ ಮೂಡಿಸಿದ ಜೈಶಂಕರ್- ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತುಕತೆ

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

ಅಸ್ಸಾಂನಲ್ಲಿ ರಾಡಾರ್ ಸಂಪರ್ಕದಿಂದ ವಾಯುಪಡೆಯ Sukhoi 30 ನಾಪತ್ತೆ

SCROLL FOR NEXT