ಲಖನೌ: ಗುರುವಾರ ನಿಧನರಾದ ಭಾರತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಪವಿತ್ರ ನದಿಗಳಲ್ಲಿ ಸಮರ್ಪಿಸಲು ಬಿಜೆಪಿ ಮುಂದಾಗಿದ್ದು ಉತ್ತರಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿನ ನದಿಗಳಲ್ಲಿ ಅಟಲ್ ಚಿತಾಭಸ್ಮವನ್ನು ಸಮರ್ಪಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಹೇಳಿದೆ.
ಗಂಗಾ, ಯಮುನಾ, ಬ್ರಹ್ಮಪುತ್ರ ಸೇರಿದಂತೆ ದೇಶದ ವಿವಿಧ ಪವಿತ್ರ ನದಿಗಳಲ್ಲಿ ಚಿತಾಭಸ್ಮವನ್ನು ಸಮರ್ಪಿಸಲಾಗುವುದು.ಎಂದು ಪಕ್ಷದ ಮೂಲಗಳು ಹೇಳಿದೆ.
ಉತ್ತರ ಪ್ರದೇಶ ಸರಕಾರವು 75 ಜಿಲ್ಲೆಗಳನ್ನು ಪಟ್ಟಿ ಮಾಡಿದೆ ಮತ್ತು ಭಾರತೀಯ ಜನತಾ ಪಕ್ಷದ ನಾಯಕನ ಬೂದಿಯನ್ನು ಸಣ್ಣ ಹಾಗೂ ದೊಡ್ಡ ನದಿಗಳಲ್ಲಿ ತೇಲಿ ಬಿಡಲಾಗುತ್ತದೆ ಎಂದು ಹೇಳಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಚಾರವನ್ನು ತಿಳಿಸಿದ್ದು ಏಕೆಂದರೆ ಉತ್ತರ ಪ್ರದೇಶ ವಾಜಪೇಯಿಯವರ 'ಕರ್ಮಭೂಮಿ' ಅವರು ಕೆಲಸ ಮಾಡಿದ್ದ ಸ್ಥಳ, ಇಲ್ಲಿನ ಜನರು ತಮ್ಮ ನಾಯಕನ ಅಂತಿಮ ಯಾನದ ಭಾಗವಾಗಲು ಬಯಸುತ್ತಾರೆ ಎಂದರು.
ವಾಜಪೇಯಿ ಸತತ ಐದು ಬಾರಿ ಉತ್ತರ ಪ್ರದೇಶದ ಲಖನೌ ನಿಂದ ಲೋಕಸಭೆಯನ್ನು ಪ್ರತಿನಿಧಿಸಿದ್ದರು. ಅವರು 1991, 1996, 1998, 1999 ಮತ್ತು 2004ರಲ್ಲಿ ಲಖನೌನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಭಾರತೀಯ ಜನತಾ ಪಕ್ಷದ ಲಖನೌ ಘಟಕದಲ್ಲಿ ಆಗಸ್ಟ್ 21 ರಂದು ಲಖನೌ ಪ್ರಸ್ತುತ ಸಂಸದರಾದ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತಿತರೆ ಮುಖಂಡರು ವಾಜಪೇಯಿಯವರಿಗೆ ಅಂತಿಮ ಗೌರವ ಸಲ್ಲಿಸಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos