ವಾಜಪೇಯಿ 
ದೇಶ

ಭಾರತದ ಟೆಲಿಕಾಂ ಕ್ರಾಂತಿಗೆ ಅಡಿಪಾಯ ಹಾಕಿದ್ದ ವಾಜಪೇಯಿ!

1998 ರಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ರಚಿಸಿದಾಗ ಟೆಲಿಕಾಂ ವಲಯದ ಸಂಪೂರ್ಣ ಅಸ್ತವ್ಯ್ಸ್ಥವಾಗಿತ್ತು. ಟೆಲಿಕಾಂ ಕಂಪೆನಿಗಳು ಸಂಕಷ್ಟದಲ್ಲಿದ್ದವು

ನವದೆಹಲಿ: 1998 ರಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ರಚಿಸಿದಾಗ ಟೆಲಿಕಾಂ ವಲಯದ ಸಂಪೂರ್ಣ ಅಸ್ತವ್ಯ್ಸ್ಥವಾಗಿತ್ತು.  ಟೆಲಿಕಾಂ ಕಂಪೆನಿಗಳು ಸಂಕಷ್ಟದಲ್ಲಿದ್ದವು. ದುಬಾರಿ ಕರೆ ದರಗಳ ಕಾರಣ ಟೆಲಿಕಾಂ ಸೇವೆಗಳ ಬಳಕೆಯು  ವೇಗವನ್ನು ಪಡೆದಿರಲಿಲ್ಲ. (ಡೇಟಾವು ಆ ಸಮಯದಲ್ಲಿ ಅಸ್ತಿತ್ವದಲ್ಲಿಲ್ಲ!). ರಿಲಯನ್ಸ್ ಜಿಯೊದಂತಹಾ ದೊಡ್ಡ ಖಾಸಗಿ ಸಂಸ್ಥೆಗಳು ಟೆಲಿಕಾಂ ಕ್ಷೇತ್ರದಲ್ಲಿರಲಿಲ್ಲ.ವಾಜಪೇಯಿ ಸರ್ಕಾರವು ಟೆಲಿಕಾಂ ಕ್ಷೇತ್ರದ ಬೆಳವಣಿಗೆಯನ್ನು ತ್ವರಿತವಾಗಿ ಹೆಚ್ಚಿಸಲು ಅಂದಿನ ದಿನದಲ್ಲಿ ಕೆಲವು ಅಭೂತಪೂರ್ವ ನಿರ್ಧಾರ ತೆಗೆದುಕೊಂಡಿತ್ತು. ವಾಜಪೇಯಿ ತಾವು ತೆಗೆದುಕೊಂಡಿದ್ದ ಕೆಲವು ಐತಿಹಾಸಿಕ ನಿರ್ಧಾರದ ಕುರಿತ ಕಿರು ಮಾಹಿತಿ ಇಲ್ಲಿದೆ-
ಹೊಸ ಟೆಲಿಕಾಂ ನೀತಿ ಜಾರಿಗೆ ತಂದ ವಾಜಪೇಯಿ ಸರ್ಕಾರದ ಕ್ರಮದಿಂದ ಟೆಲಿಕಾಂ ಕ್ಷೇತ್ರದ ಬೆಳವಣಿಗೆ ಗಣನೀಯವಾಗಿ ಹೆಚ್ಚಾಯಿತು. ಟೆಲಿಕಾಮ್ ಬಳಕೆ  1994 ರಲ್ಲಿ 1.2% ಇದ್ದದ್ದು  1999 ರಲ್ಲಿ 2.3% ಕ್ಕೆ ಏರಿತು. 
ಹೊಸ ಟೆಲಿಕಾಂ ನೀತಿಯು ಆದಾಯ ಹಂಚಿಕೆ ಮಾದರಿಯನ್ನು ಬದಲಿಸಿದೆ.ಅಲ್ಲಿಯವರೆಗೆ ಟೆಲ್ಕೋಸ್ ಆದಾಯ ಹಂಚಿಕೆಗೆ ಹೆಚ್ಚುವರಿಯಾಗಿ ಒಂದು-ಬಾರಿ ಪ್ರವೇಶ ಶುಲ್ಕವನ್ನು ವಿಧಿಸುತ್ತಿತ್ತು.ಅಲ್ಲದೆ ವಾರ್ಷಿಕ ಪರವಾನಗಿ ಶು;ಲ್ಕ ಸಹ ದುಬಾರಿಯಾಗಿತ್ತು.ಮೆಟ್ರೊಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಟೆಲ್ಕೋಸ್ ಗಳು ಗ್ರಾಹಕರಿಗೆ ಅತಿಯಾದ ಕರೆ ದರಗಳನ್ನು ವಿಧಿಸುತ್ತಿದ್ದರು. ಉದಾಹರಣೆಗೆ 1998 ರಲ್ಲಿ, ಒಳಬರುವ ಕರೆ ದರಗಳು ಪ್ರತಿ ನಿಮಿಷಕ್ಕೆ 16.80 ರೂ. ಮತ್ತು ಹೊರಹೋಗುವ ದರಗಳು ಇನ್ನೂ ಹೆಚ್ಚಾಗಿದ್ದವು!
1999 ರಲ್ಲಿ, ಸುಮಾರು 22 ಸೆಲ್ಯುಲರ್ ಆಪರೇಟರ್ ಗಳು ಒಟ್ಟು 7,700 ಕೋಟಿ ರೂ ಮೊತ್ತದಷ್ಟನ್ನು ಮೂಲಭೂತ ಸೌಕರ್ಯದಲ್ಲಿ ಹೂಡಿಕೆ ಮಾಡಲು ಆದಾಯ ಹಂಚಿಕೆ ಮಾದರಿ ಅವಕಾಶ ಒದಗಿಸಿತು. ಇದು ಟೆಲಿಕಾಂ ಕಂಪನಿಗಳಿಗೆ ದೊಡ್ಡ ಮಟ್ಟದ ತಿರುವನ್ನು ಒದಗಿಸಿತು.ಕಡಿಮೆ ವರಮಾನವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು, ಟೆಲ್ಕೋಸ್ ಸುಂಕವನ್ನು ಕಡಿಮೆಗೊಳಿಸಲು ಸಾಧ್ಯವಾಯಿತು, ಇದಕ್ಕೆ ಪ್ರತಿಯಾಗಿ ಅಗ್ಗದ ಟೆಲಿಕಾಂ ಸೇವೆಗಳು ಲಭಿಸಿದವು, ಹೆಚ್ಚು ಜನರು ಟೆಲಿ ಕಮ್ಯುನಿಕೇಷನ್ ಬಳಸಲು ಇದು ಸಹಕಾರ ನೀಡಿತು.
ವಾಜಪೇಯಿ ಕಾಲಘಟ್ಟದಲ್ಲಿ ಸರ್ಕಾರಿ ಪೂರೈಕೆದಾರರಿಂದ ಟೆಲಿಕಾಂ ಪಾಲಿಸಿ ಫಾರ್ಮುಲೇಃಅನ್ ಅನ್ನು ಪ್ರತ್ಯೇಕಿಸಲಾಯಿತು. ಈ ಪ್ರಕಾರವಾಗಿ 2000 ರಲ್ಲಿ ಸ್ಥಾಪನೆಯಾದ ಬಿಎಸ್ಎನ್ಎಲ್, ಖಾಸಗಿ ಆಪರೇಟರ್ ಗಳೊಡನೆ ಸ್ಪರ್ಧಿಸುವ ಗುರಿ ಹೊಂದಿತ್ತು.ಇದಕ್ಕಾಗಿ ಅದು ಕಾರ್ಪೋರೇಟ್ ಜಗತ್ತನ್ನು ಪ್ರವೇಶಿಸಿದ್ದಲ್ಲದೆ , 2004 ರ ಹೊತ್ತಿಗೆ ಭಾರತ್ ಏರ್ ಟೆಲ್ ನ ಗ್ರಾಹಕರ ಬೇಸ್ಗೆ ಸಮನಾದ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳಲು ಸಮರ್ಥವಾಗಿತ್ತು.
2015 ರಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, "ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರವು ಬಿಎಸ್ಎನ್ಎಲ್ 10,000 ಕೋಟಿ ರೂ ಲಾಭದ ಹಂತಕ್ಕೆ ತಂದು ನಿಲ್ಲಿಸಿತ್ತು" ಎಂದು ಹೇಳುತ್ತಾರೆ.
ಟೆಲಿಕಾಂ ವಿವಾದಗಳ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್ಎಟ) ಅನ್ನು ವಾಜಪೇಯಿ ಸರ್ಕಾರ 000 ರಲ್ಲಿ ಸ್ಥಾಪಿಸುವುದರೊಡನೆ ಟೆಲಿಕಾಂ ನಿಯಂತ್ರಕ ಟ್ರಾಯ್ ನಿಂದ ನ್ಯಾಯಾಂಗ ಅಧಿಕಾರವನ್ನು ಹಿಂದೆಗೆದುಕೊಂಡಿತು. ಟಿಡಿಎಸ್ಎಟ ಟೆಲಿಕಾಂ ವಲಯದ ವಿವಾದಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದು ಇದರ ಆದೇಶಗಳನ್ನು ಕೇವಲ ಸುಪ್ರೀಂ ಕೋರ್ಟ್ ನಲ್ಲಿ ಂಆತ್ರವೇ ಪ್ರಶ್ನಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!