ರಕ್ಷಣಾ ಕಾರ್ಯಾಚರಣೆ 
ದೇಶ

ಕೇರಳ ಪ್ರವಾಹ : ಸ್ವಲ್ಪ ಮಟ್ಟಿಗೆ ತಗ್ಗಿದ ಮಳೆ, ರಕ್ಷಣಾ ಕಾರ್ಯಾಚರಣೆ ಬಿರುಸು

ಶತಮಾನದಲ್ಲಿಯೇ ಅತ್ಯಂತ ಭೀಕರ ಪ್ರವಾಹದ ಹೊಡೆತಕ್ಕೆ ತುತ್ತಾಗಿರುವ ನೆರೆಯ ಕೇರಳದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಮಳೆ ತಗ್ಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕೇರಳ :ಶತಮಾನದಲ್ಲಿಯೇ  ಅತ್ಯಂತ  ಭೀಕರ ಪ್ರವಾಹದ ಹೊಡೆತಕ್ಕೆ ತುತ್ತಾಗಿರುವ ನೆರೆಯ ಕೇರಳದಲ್ಲಿ ಇಂದು  ಸ್ವಲ್ಪ ಮಟ್ಟಿಗೆ ಮಳೆ ತಗ್ಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 8 ಜಿಲ್ಲೆಗಳಲ್ಲಿ 58 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಡಿಜಿ ತಿಳಿಸಿದ್ದಾರೆ.

 ಈ ತಂಡಗಳು  ರಸ್ತೆ ತೆರವು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚು ಹಾನಿಗೊಂಡಿರುವ ಪ್ರದೇಶಗಳಿಗೆ ಎನ್ ಡಿಆರ್ ಎಫ್ ತುಕಡಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಇಂದು ಬೆಳಗ್ಗೆ ಪಾಲ್ಕಾಡ್ ಜಿಲ್ಲೆಯಲ್ಲಿ ಸಹ ಮೃತದೇಹವೊಂದನ್ನು ಪತ್ತೆ ಹಚ್ಚಲಾಗಿದೆ.  ಈ  ಪ್ರದೇಶದಲ್ಲಿ ಈವರೆಗೂ 10 ಮೃತದೇಹಗಳು ಸಿಕ್ಕಿವೆ. ಭೂ ಕುಸಿತಗಳು ಇಂದು ಸಹ ಉಂಟಾಗುತ್ತಿದ್ದು, ಮೃತದೇಹಗಳನ್ನು ಪತ್ತೆ ಹಚ್ಚುವ ಕಾರ್ಯ ಕಷ್ಟಸಾಧ್ಯವಾಗಿದೆ  ಎಂದು ಆರ್ ಎಫ್  ಕೊಯಂಬತ್ತೂರು ಘಟಕದ ಉಪ ಕಮಾಂಡೆಂಟ್  ಹೇಳಿದ್ದಾರೆ.
ಸಂತ್ರಸ್ತರ ನೆರವಿಗಾಗಿ ದೇಶಾದ್ಯಂತ ನೆರವಿನ ಭರಪೂರವೇ ಹರಿದುಬರುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  10 ಕೋಟಿ ರೂಪಾಯಿ ಪರಿಹಾರವನ್ನು ನೀಡಿದ್ದಾರೆ.
ಆಂಧ್ರಪ್ರದೇಶದ ಐಎಎಸ್ ಅಧಿಕಾರಿಗಳ ಸಂಘದಿಂದ ಒಂದು ದಿನದ ಸಂಬಳವನ್ನು ಪರಿಹಾರವಾಗಿ ನೀಡುವುದಾಗಿ ತಿಳಿಸಿದೆ. ಅನ್ ಬೊಡು ಕೊಚಿ ಸ್ವಯಂ ಸೇವಾ ಸಂಸ್ಥೆ ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಲು ಸಂಗ್ರಹಣ ಕೇಂದ್ರವನ್ನು ತೆರೆದಿದೆ.
ಭಾರತೀಯ ನೌಕದಳದ ಹಡಗಿನ ಮೂಲಕ ಸಂತ್ರಸ್ತರಿಗೆ  ಕುಡಿಯುವ ನೀರು ಸೇರಿದಂತೆ ಮತ್ತಿತರ ಸಾಮಾಗ್ರಿಗಳನ್ನು  ಸರಬರಾಜು ಮಾಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ