ತಿರುವನಂತಪುರ: ಭೀಕರ ಪ್ರವಾಹದಿಂದಾಗಿ ನಲುಗಿ ಹೋಗಿದ್ದ ಕೇರಳ ರಾಜ್ಯದ 14 ಜಿಲ್ಲೆಗಳ ಪೈಕಿ 12ಗಳಲ್ಲಿ ಘೋಷಣೆ ಮಾಡಲಾಗಿದ್ದ ರೆಡ್ ಅಲರ್ಟ್'ನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ಇದೀಗ ಆರೆಂಜ್ ಅಲರ್ಟ್ ಹಾಗೂ ಮತ್ತೆರಡು ಜಿಲ್ಲೆಯಲ್ಲಿ ಯೆಲ್ಲೋ (ಹಳದಿ) ಅಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಈ ವರೆಗೂ 20,000ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದೆ.
ಅಚನ್ಕೊಯಿಲ್ ಮತ್ತು ಮುವತ್ತುಪುಝಾ ನದಿಗಳು ತುಂಬಿ ನಾಗರೀಯ ಪ್ರದೇಶಗಳತ್ತ ಹರಿದ ಪರಿಣಾಮ ಪಥನಮ್ತಿಟ್ಟ ಜಿಲ್ಲೆಯ ಪಂಡಮ್ ಹಾಗೂ ಕೊಟ್ಟಾಯಂನ ಥಳಯೊಲಪ್ಪರಂಬು ನಗರಗಳಲ್ಲಿ ಭೀತಿ ಎದುರಾಗಿತ್ತು.