ದಾವೂದ್ ಇಬ್ರಾಹಿಂ ಮತ್ತು ಜಬೀರ್ ಮೋತಿ
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಜಬೀರ್ ಮೋತಿ ಎಂಬಾತನನ್ನು ಲಂಡನ್ ನ ಹಿಲ್ಟನ್ ಹೋಟೆಲ್ ನಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ದಾವೂದ್ ಸಿಂಡಿಕೇಟ್ ನ ಪ್ರಮುಖ ಸದಸ್ಯನಾಗಿದ್ದ ಹಾಗೂ ದಾವೂದ್ ನ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಮೋತಿ, ಯುಎಇ ಹಾಗೂ ಯುಕೆಯಲ್ಲಿನ ಆರ್ಥಿಕ ವ್ಯವಹಾರ, ಹೂಡಿಕೆಗಳನ್ನು ನಿಭಾಯಿಸುತ್ತಿದ್ದ.
ಬೇರೆಡೆಗಳಿಂದ ಸಂಗ್ರಹವಾಗುತ್ತಿದ್ದ ಹಣವನ್ನು ಭಯೋತ್ಪಾದನ ಚಟುವಟಿಕೆಗಳಿಗೆ ಹಂಚುವ ಕೆಲಸವನ್ನು ನಿಭಾಯಿಸುತ್ತಿದ್ದ.
ಪಾಕಿಸ್ತಾನ, ಮಧ್ಯಪ್ರಾಚ್ಯ ದೇಶಗಳಲ್ಲಿ ನೆಲೆ ಕಂಡಿದ್ದ ಮೋತಿ, ಇತ್ತೀಚೆಗೆ ಯುಕೆಗೆ ಶಾಶ್ವತವಾಗಿ ಶಿಫ್ಟ್ ಆಗುವ ಯೋಜನೆಯಲ್ಲಿದ್ದ. ಯುಕೆಗೆ 10 ವರ್ಷಗಳ ವೀಸಾ ಪಡೆದುಕೊಂಡಿದ್ದ. ಜತೆಗೆ ಆಂಟಿಗುವಾದಲ್ಲೂ ನೆಲೆಸಲು ಚಿಂತಿಸಿದ್ದ ಎಂದು ತಿಳಿದು ಬಂದಿದೆ.
ಡಿ ಸಿಂಡಿಕೇಟ್ ಗೆ ಸೇರಿದ ಅಪಾರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಯತ್ನದಲ್ಲಿರುವ ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಮೋತಿ ವಿಚಾರಣೆಯಿಂದ ಹೆಚ್ಚಿನ ವಿವರಗಳು ಸಿಗುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics