ದೇಶ

ಕೇರಳ ಪ್ರವಾಹ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ನೇತೃತ್ವದಲ್ಲಿ ಪರಾಮರ್ಶನ ಸಭೆ

Nagaraja AB

ನವದೆಹಲಿ: ಕೇರಳ ಪ್ರವಾಹ ಪರಿಸ್ಥಿತಿಯ ಬಗ್ಗೆ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರೊಂದಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಪರಾಮರ್ಶನಾ ಸಭೆ ನಡೆಸಿ,  ಒಂದು ತಿಂಗಳ ಸಂಬಳವನ್ನು ಪರಿಹಾರ ನೀಡಲು ನಿರ್ಧರಿಸಲಾಯಿತು.

ಉಪರಾಷ್ಟ್ರಪತಿಗಳ ಕಾರ್ಯದರ್ಶಿ ಐ. ವಿ. ಸುಬ್ಬಾರಾವ್ ಮತ್ತು ಮೇಲ್ಮನೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಮಧ್ಯೆ ಕೇರಳದಲ್ಲಿನ ಪ್ರವಾಹ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದು, ವಿವಿಧ ರಾಜ್ಯಗಳ ಮುಖಂಡರುಗಳು  ಕೇರಳ ರಾಜ್ಯಕ್ಕೆ ಧನ ಸಹಾಯ ನೀಡಿದ್ದಾರೆ.

ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದೊಂದಿಗೆ ಕೇಂದ್ರಸರ್ಕಾರ ಕೂಡಾ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೆ.  ಶನಿವಾರ ವೈಮಾನಿಕ ಪರೀಕ್ಷೆ ನಡೆಸಿದ ಪ್ರಧಾನಿ ನರೇಂದ್ರಮೋದಿ 500 ಕೋಟಿ ರೂಪಾಯಿ ನೆರವು ಘೋಷಿಸಿದ್ದರು. ನಂತರ  ಹೆಚ್ಚುವರಿಯಾಗಿ 100 ಕೋಟಿ ಹಣವನ್ನು  ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.

ಶತಮಾನಗಳಲ್ಲಿಯೇ ಅತ್ಯಂತ ಭೀಕರವಾದ ಪ್ರವಾಹ ಕೇರಳದಲ್ಲಿ ಉಂಟಾಗಿ 357 ಜನರನ್ನು ಬಲಿತೆಗೆದುಕೊಂಡಿದೆ.

SCROLL FOR NEXT