ಔರಂಗಾಬಾದ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿರೋಧಿಸಿದ ಎಂಐಎಂ ಕಾರ್ಪೋರೇಟರ್ ಗೆ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಬಿಜೆಪಿ ಕಾರ್ಪೊರೇಟರ್ ಗಳನ್ನು ಬಂಧಿಸಲಾಗಿದೆ.
ವಾಜಪೇಯಿ ಅವರಿಗೆ ಸಂತಾಪ ಸೂಚಿಸುವ ವಿಚಾರವಾಗಿ ಮಹಾರಾಷ್ಟ್ರದ ಔರಂಗಬಾದ್ ಮಹಾನಗರ ಪಾಲಿಕೆಯಲ್ಲಿ ದೊಡ್ಡ ಜಟಾಪಟಿಯೇ ನಡೆದಿತ್ತು. ಸಭೆಯಲ್ಲೇ ಎಂಐಎಂ ಕಾರ್ಪೋರೇಟರ್ ಗೆ ಬಿಜೆಪಿ ನಾಯಕರು ಥಳಿಸಿದ್ದರು. ಥಳಿತಕ್ಕೊಳಗಾದ ರಶೀದ್ ಅವರು ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸ್ ಅಧಿಕಾರಿಗಳು ಉಪಮಹಾಪೌರರಾದ ವಿಜಯ್ ಔಟಡೇ, ಕಾರ್ಪೊರೇಟರ್ ಗಳಾದ ಪ್ರಮೋದ್ ರಾಥೋಡ್, ರಾಜ್ಗೌರವ್ ವಾಂಖಡೇ, ರಾಮೇಶ್ವರ್ ಭಾವ್ಡೇ ಹಾಗೂ ಮಹಿಳಾ ಕಾರ್ಪೊರೇಟಾರ್ ಮಾಧ್ವಿ ಆದ್ವಾಂತ್ ಅವರನ್ನು ಬಂಧಿಸಿದ್ದಾರೆ.
ಬಂಧಿತ ಕಾರ್ಪೊರೇಟರ್ ಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಇನ್ನು ರಶೀದ್ ನ್ನೂ ಸಹ ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದ ಆರೋಪದಡಿ ಆ.18 ರಂದು ಬಂಧಿಸಲಾಗಿತ್ತು.