ನವದೆಹಲಿ: ಕಾಂಗ್ರೆಸ್ ಪಕ್ಷದ ನೂತನ ಖಜಾಂಚಿಯಾಗಿ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ನೇಮಕವಾಗಿದೆ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಅಹ್ಮದ್ ಪಟೇಲ್ ಅವರನ್ನು ಖಜಾಂಚಿ ಹುದ್ದೆಗೆ ನೇಮಕ ಮಾಡಿ ಆದೇಶಿಸಿದ್ದಾರೆ. ಇದೇ ವೇಳೆ ಮೋತಿಲಾಲ್ ವೋರಾ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದಾರೆ.
ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲ್ಈ ಹಿಂದೊ ಸಹ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಪಕ್ಷದ ವಿದೇಶಾಂಗ ಇಲಾಖೆಯ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ನೇಮಕವಾಗಿದ್ದು ಕರಣ್ ಸಿಂಗ್ ಬದಲಿಗೆ ಶರ್ಮಾ ಈ ಹುದ್ದೆಯನ್ನು ವಹಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರದ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿಗೆ ಆಹ್ವಾನಿಸಲಾಗಿದೆ.
ಇನ್ನು ಕಾಂಗ್ರ್ಸ್ ಪಕ್ಷವು ಲುಯಿಜಿನ್ಹೋ ಸಲೆರಿಯೊ ಅವರನ್ನು ರು ಈಶಾನ್ಯ ರಾಜ್ಯಗಳ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಅಸ್ಸಾಂ ಹೊರತು) ಯಾಗಿ ನೇಮಕ ಮಾಡಿದ್ದು ಈ ಹಿಂದೆ ಈ ಹುದ್ದೆಯಲ್ಲಿದ್ದ ಸಿ ಪಿ ಜೋಶಿಯನ್ನು ಬದಲಿಸಲಾಗಿದೆ.