ಕೊಚ್ಚಿ :ವಿನಾಶಕಾರಿ ಪ್ರವಾಹದಿಂದ ಜರ್ಝರಿತಗೊಂಡಿರುವ ಕೇರಳ ರಾಜ್ಯದಲ್ಲಿ ಪರಿಹಾರ ಕಾರ್ಯಕ್ಕಾಗಿ ಅಮೆರಿಕಾದ ದೈತ್ಯ ಸಾಪ್ಟ್ ವೇರ್ ಕಂಪನಿ ಅಪಲ್ ಕಂಪನಿ 7 ಕೋಟಿ ರೂಪಾಯಿ ನೆರವು ಘೋಷಿಸಿದೆ.
ಪ್ರವಾಹದ ಸಂತ್ರಸ್ತರಿಗೆ ನೆರವು ನೀಡಲು ಹಾಗೂ ಮನೆ, ಶಾಲೆಗಳನ್ನು ಪುನರ್ ನಿರ್ಮಾಣ ಮಾಡಲು ಭಾರತದ ಮರ್ಸಿ ಕಾರ್ಪೋರೇಷನ್ ಹಾಗೂ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 7 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದೆ ಎಂದು ಕ್ಯುಪರ್ಟಿನೊ ಮೂಲದ ಐಫೋನ್ ಮೇಕರ್ ಹೇಳಿಕೆಯಲ್ಲಿ ತಿಳಿಸಿದೆ.
ಆಪ್ ಸ್ಟೋರ್, ಐಟ್ಯೂನ್ ನಲ್ಲಿ "ಡೊನೇಟ್" ಬಟನ್ ಸೇರಿಸಲಾಗಿದ್ದು, ಹೋಮ್ ಪೇಜ್ ಬ್ಯಾನರ್ ನಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವನ್ನು ಬೆಂಬಲಿಸುತ್ತಿದೆ.ಆಪ್ ಸ್ಟೋರ್ , ಐಟ್ಯೂನ್ ನಲ್ಲಿ "ಡೊನೇಟ್" ಬಟನ್ ಸೇರಿಸಲಾಗಿದ್ದು, ಮರ್ಸಿ ಕಾರ್ಪೋರೇಷನ್ ಗೆ ಗ್ರಾಹಕರು ನೆರವು ನೀಡುವಂತೆ ಹೇಳಲಾಗುತ್ತಿದೆ ಎಂದು ಅಪಲ್ ಕಂಪನಿ ತಿಳಿಸಿದೆ.