ಅಮರ್ತ್ಯ ಸೇನ್ 
ದೇಶ

ಲೋಕಸಭಾ ಚುನಾವಣೆ: ಕೋಮುವಾದಿಯೇತರ ಪಕ್ಷಗಳ ಮೈತ್ರಿ ಅಗತ್ಯ-ಅಮರ್ತ್ಯಸೇನ್

2019 ರ ಲೋಕಸಭಾ ಚುನಾವಣೆಗಾಗಿ ಕೋಮುವಾದಿಯೇತರ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದ್ದು, ಎಡಪಕ್ಷಗಳು ಮೈತ್ರಿ ಸೇರಲು ಹಿಂಜರಿಯಬಾರದು ಎಂದು ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ.

ಕೋಲ್ಕತ್ತಾ  : 2019 ರ ಲೋಕಸಭಾ ಚುನಾವಣೆಗಾಗಿ ಕೋಮುವಾದಿಯೇತರ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದ್ದು, ಎಡಪಕ್ಷಗಳು ಮೈತ್ರಿ ಸೇರಲು ಹಿಂಜರಿಯಬಾರದು ಎಂದು ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್   ಹೇಳಿದ್ದಾರೆ.

ನಿರಂಕುಶ ಪ್ರವೃತ್ತಿ ವಿರುದ್ಧ ನಾವು ವಿರೋಧ ವ್ಯಕ್ತಪಡಿಸಿಬೇಕು, ಸರ್ವಾಧಿಕಾರ ಪ್ರವೃತಿ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಇಂತಹ ವಿಚಾರಗಳನ್ನು ಟೀಕಿಸಲು ಕೋಮುವಾದಿಯೇತರ ಶಕ್ತಿಗಳು ಒಂದಾಗಬೇಕಿದೆ. ಆದರೆ, ಕೋಮುವಾದಿ ವಿರುದ್ಧ ಹೋರಾಟದ ಸಂದರ್ಭದಲ್ಲಿ ನಾವು ಒಂದಾಗಿ ಕೈ ಜೋಡಿಸುತ್ತಿಲ್ಲ. ಇದು ದೊಡ್ಡ ಬೆದರಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2014ರ ಚುನಾವಣೆಯಲ್ಲಿ ಶೇ 55 ರಷ್ಟು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಒಟ್ಟಾರೇ,  ಶೇ. 31 ರಷ್ಟು ಮತಗಳನ್ನು ಮಾತ್ರ ಪಡೆದಿತ್ತು . ರಾಜಕೀಯ ದುರುದ್ದೇಶದಿಂದ ಅಧಿಕಾರಕ್ಕೆ ಬಂದಿತ್ತು ಎಂದು ಅಮರ್ತ್ಯ ಸೇನ್ ಕಟುವಾಗಿ ಟೀಕಿಸಿದ್ದಾರೆ.

 ದೇಶದಲ್ಲಿನ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ. ಆದರೆ, ಜನರಿಂದ ಮಾತ್ರ ರಕ್ಷಿಸಲು ಸಾಧ್ಯವಿದೆ. ಒಂದು ವೇಳೆ ಹೀಗೆ ಹೇಳಿದ್ದರೆ ಕೆಲ ವ್ಯಕ್ತಿಗಳಿಂದ ಥಳಿತಕ್ಕೊಳಗಾಗಬೇಕಿದೆ.  ಆದರೆ, ಈಗಲೂ ಕೂಡಾ ಅದನ್ನು ತಿದ್ದುಪಡಿಮಾಡಬಹುದಾಗಿದೆ.  ಅದು ಮುಳುಗುವ ದೋಣಿಯಂತಲ್ಲ ನಾವೆಲ್ಲರೂ ತ್ಯಜಿಸಬೇಕಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬಹುಪಕ್ಷಗಳ ಪದ್ಧತಿಯಿಲ್ಲದೆ ಪ್ರಜಾಪ್ರಭುತ್ವ ಕಾರ್ಯನಿರ್ವಹಣೆ ಅಸಾಧ್ಯವಾದದ್ದು, ಏಕಪಕ್ಷೀಯ  ವ್ಯವಸ್ಥೆಯಲ್ಲಿ ಇರುವಂತಹ  ಸರ್ವಾಧಿಕಾರಿ ವ್ಯವಸ್ಥೆಯನ್ನು ಹಲವು ವರ್ಷಗಳಿಂದ ನಾವು ನೋಡಿದ್ದೇವೆ ಎಂದು ಅಮರ್ತ್ಯ ಸೇನ್     ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

ಇರಾನ್, ಅಮೆರಿಕದ ಎರಡು ಬಲಿಷ್ಠ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ್ದು ಹೇಗೆ?, ಇಲ್ಲಿದೆ ಸ್ಫೋಟಕ ವಿಚಾರ!

ನಿತೀಶ್ ಕುಮಾರ್ ಪುತ್ರ ನಿಶಾಂತ್ ಮುಂದಿನ CM; ಪಾಟ್ನಾ ಜೆಡಿಯು ಕಚೇರಿ ಮುಂದೆ ಪೋಸ್ಟರ್‌!

ಮೈತ್ರಿಯಲ್ಲಿ ಬಿರುಕು, ಸಾಲ ವಾಪಸ್ ಕೇಳಿದ UAE; ತಿಂಗಳಾಂತ್ಯಕ್ಕೆ 3.5 ಬಿಲಿಯನ್ ಡಾಲರ್ ಪಾವತಿಸಬೇಕಿದೆ ಪಾಕ್!

SCROLL FOR NEXT