ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜವಹರ್ ಲಾಲ್ ನೆಹರೂ ಸ್ಮಾರಕಕ್ಕೆ ಧಕ್ಕೆ ಮಾಡಬೇಡಿ: ಪ್ರಧಾನಿಗೆ ಮನಮೋಹನ್ ಪತ್ರ!

ಜವಹರ್ ಲಾಲ್ ನೆಹರೂ ಕೇವಲ ಕಾಂಗ್ರೆಸ್​ಪಕ್ಷದವರಲ್ಲ, ಬದಲಾಗಿ ಇಡೀ ದೇಶದವರು. ಹೀಗಿರುವಾಗ ತ್ರಿಮೂರ್ತಿ ಭವನಕ್ಕೆ...

ಮನ ಮೋಹನ ಸಿಂಗ್
Shilpa D
Updated On : 27 Aug 2018, 12:52 pm
ನವದೆಹಲಿ: ಜವಹರ್ ಲಾಲ್ ನೆಹರೂ ಕೇವಲ ಕಾಂಗ್ರೆಸ್​ಪಕ್ಷದವರಲ್ಲ, ಬದಲಾಗಿ ಇಡೀ ದೇಶದವರು. ಹೀಗಿರುವಾಗ ತ್ರಿಮೂರ್ತಿ ಭವನಕ್ಕೆ ಯಾವುದೇ ರೀತಿಯ ಹಾನಿಯುಂಟು ಮಾಡಬೇಡಿ ಎಂದು  ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 
ತ್ರಿಮೂರ್ತಿ ಭವನ ಪರಿಸರದಲ್ಲಿ ಎಲ್ಲಾ ಪ್ರಧಾನ ಮಂತ್ರಿಗಳ ಸಂಗ್ರಾಹಾಲಯ(ಎನ್​ಎಮ್​ಎಮ್​ಎಲ್​) ಸ್ಥಾಪಿಸುವ ಕುರಿತಾಗಿ ಸರ್ಕಾರ ಪ್ರಸ್ತಾಪಿಸಿದಾಗ ಕಾಂಗ್ರೆಸ್​ ವಿರೋಧಿಸಿತ್ತು. 
ಅಂದಿನಿಂದ ನೆಹರೂ ಸ್ಮಾರಕ ಹಾಗೂ ಸಂಗ್ರಹಾಲಯ ಹಾಗೂ ಗ್ರಂಥಾಲಯವು ಸುದ್ದಿಯಾಗುತ್ತಲೇ ಇದೆ. ಹೀಗೆ ಮಾಡುವುದರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೆಹರೂ ಸ್ಮಾರಕಕ್ಕೆ ಧಕ್ಕೆಯಾಗುತ್ತದೆ ಎಂಬುದು ಕಾಂಗ್ರೆಸ್​ ಅಭಿಪ್ರಾಯವಾಗಿದೆ.

Advertisement

Advertisement

ಈ ಹಿಂದಿನಿಂದಲೂ ಬಿಜೆಪಿ ನೆಹರೂರವರ ನೆನಪುಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಅರೋಪಿಸುತ್ತಾ ಬಂದಿದೆ. ಸದ್ಯ ಐತಿಹಾಸಿಕ ತ್ರಿಮೂರ್ತಿ ಭವನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ, ಮನಮೋಹನ್​ ಸಿಂಗ್​ರವರು ಬರೆದಿರುವ ಪತ್ರದಲ್ಲಿ ಸರ್ಕಾರವು ನೆಹರೂರವರ ಕೊಡುಗೆಯನ್ನು ಅಳಿಸಿ ಹಾಕುವ ಯತ್ನ ಮಾಡುತ್ತಿದೆ ಎಂದು ದೂರಿದ್ದಾರೆ.
ದಿವಂಗತ ಪ್ರಧಾನಿ ವಾಜಪೇಯಿಯವರ ಕುರಿತಾಗಿ ಬರೆದಿದ್ದರು. "ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಎನ್​ಎಮ್​ಎಮ್​ಎಲ್​ ಹಾಗೂ ತ್ರಿಮೂರ್ತಿ ಭವನ ಪರಿಸರದಲ್ಲಿ ಹಾಗೂ ಚರಿತ್ರೆಯನ್ನು ಬದಲಾಯಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗ ಬದಲಾವಣೆ ತರುವುದು ಭಾರತ ಸರ್ಕಾರದ ಅಜೆಂಡಾ ಆಗಿರುವು ಖೇದಕರ ಸಂಗತಿ" ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement