ನವದೆಹಲಿ: ಭಾರತದಲ್ಲಿ ನಾಗರಿಕ ಡ್ರೋಣ್ ಹಾರಿಸುವುದಕ್ಕೆ ವಿದೇಶಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಹಾರುವ ಡ್ರೋಣ್ ಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯ ಹೊಸ ನಿಯಮಗಳನ್ನು ಘೋಷಿಸಿದ್ದು, ಡಿಸೆಂಬರ್ ನಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡ್ರೋಣ್ ಹಾರಿಸುವುದಕ್ಕೆ ವಿದೇಶಿಗರಿಗೆ ನಿರ್ಬಂಧ ವಿಧಿಸಲಾಗಿದ್ದರೆ, ಅನುಮತಿ ಇರುವ ಡ್ರೋಣ್ ಬಳಕೆದಾರರು ತಮ್ಮ ಡ್ರೋಣ್ ಹಾಗೂ ಡ್ರೋಣ್ ಫೈಲೆಟ್ ಸೇರಿದಂತೆ ಮಾಲೀಕರ ಹೆಸರನ್ನು ನೊಂದಣಿ ಮಾಡಿಸಿಕೊಳ್ಳಬೇಕಾಗಿದೆ.
ನೋಂದಣಿ ಇಲ್ಲದೇ ಅಥವಾ ಅನುಮತಿ ನಿರಾಕರಿಸಿದರೆ ಡ್ರೋಣ್ ಹಾರಾಟ ಸಾಧ್ಯವಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.