ಶಿಮ್ಲಾ :ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಶ್ ಸಿಂಗ್ ದೋನಿ ಅವರನ್ನು ಅತಿಥಿಯಾಗಿ ಕಾಣಲಾಗಿದೆ. ಆದರೆ, ಭದ್ರತೆ ಒದಗಿಸುವುದು ಬಿಟ್ಟರೆ ಬೇರೆ ಯಾವ ರೀತಿಯ ಹಣವನ್ನು ವೆಚ್ಚ ಮಾಡಲ್ಲ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.
ಮುಂಗಾರು ಅಧಿವೇಶನ ಸಂದರ್ಭದಲ್ಲಿ ಶಾಸಕ ಹೊಶ್ಯಾರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಆಗಸ್ಟ್ 27 ರಿಂದ 31 ರವರೆಗೂ ಹಿಮಾಚಲ ಪ್ರದೇಶ ಪ್ರವಾಸದಲ್ಲಿರುವ ದೋನಿ ಅವರಿಗೆ ಭದ್ರತಾ ವ್ಯವಸ್ಥೆಯನ್ನು ಮಾತ್ರ ಸರ್ಕಾರದಿಂದ ನೀಡಲಾಗಿದೆ ಎಂದು ಸ್ಪಷ್ಪಪಡಿಸಿದರು.
ಜಾಹೀರಾತುವೊಂದರ ಚಿತ್ರೀಕರಣಕ್ಕಾಗಿ ಮಹೇಂದ್ರ ಸಿಂಗ್ ಹಿಮಾಚಲ ಪ್ರದೇಶದಲ್ಲಿದ್ದಾರೆ. ಹೆಸರಾಂತ ಆಟಗಾರರಾಗಿರುವುದರಿಂದ ಅವರಿಗೆ ಭದ್ರತೆ ಒದಗಿಸಲಾಗಿದೆ. ಅದನ್ನು ಬಿಟ್ಟರೆ ನಯಾಫೈಸೆಯನ್ನು ವೆಚ್ಚ ಮಾಡಿಲ್ಲ ಎಂದು ರಾಠೂಕ್ ಸ್ಪಷ್ಪಪಡಿಸಿದರು.
ಮಹೇಂದ್ರ ಸಿಂಗ್ ಧೋನಿ ಅವರ ಪ್ರವಾಸಕ್ಕಾಗಿ ರಾಜ್ಯಸರ್ಕಾರ ವೆಚ್ಚ ಮಾಡುತ್ತಿದ್ದೆ ಎಂದು ಪ್ರತಿಪಕ್ಷಗಳ ಆರೋಪ ಕೇಳಿಬಂದ ನಂತರ ಮುಖ್ಯಮಂತ್ರಿ ಜೈರಾಮ್ ಠಾಕೂರ್ ವಿಧಾನಸಭೆಯಲ್ಲಿಂದು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.