ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸರ್ಕಾರಕ್ಕೇ ಬಡ್ಡಿ ರಹಿತ ಸಾಲ ಕೊಟ್ಟ ಶಿರಡಿ ದೇವಾಲಯದ ಟ್ರಸ್ಟ್!

ಹಣಕಾಸು ಅವಶ್ಯಕತೆ ಹೊಂದಿರುವ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಶಿರಡಿ ಸಾಯಿಬಾಬ ದೇವಾಲಯ ಟ್ರಸ್ಟ್ ಬಡ್ಡಿ ರಹಿತವಾಗಿ 500 ಕೋಟಿ ರೂಪಾಯಿ ಸಾಲ ನೀಡಿದೆ.

ಸರ್ಕಾರಕ್ಕೇ ಬಡ್ಡಿ ರಹಿತ ಸಾಲ ಕೊಟ್ಟ ಶಿರಡಿ ದೇವಾಲಯದ ಟ್ರಸ್ಟ್!
Srinivas Rao BV
Updated On : 2 Dec 2018, 12:59 pm
ಮುಂಬೈ: ಹಣಕಾಸು ಅವಶ್ಯಕತೆ ಹೊಂದಿರುವ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಶಿರಡಿ ಸಾಯಿಬಾಬ ದೇವಾಲಯ ಟ್ರಸ್ಟ್ ಬಡ್ಡಿ ರಹಿತವಾಗಿ 500 ಕೋಟಿ ರೂಪಾಯಿ ಸಾಲ ನೀಡಿದೆ. 
ಅಹ್ಮದ್ ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ನೀರಾವರಿ ಯೋಜನೆ ಪ್ರಾರಂಭವಾಗಿದ್ದು, ಯೋಜನೆ ಪೂರ್ಣಗೊಳ್ಳುವುದಕ್ಕೆ ಶಿರಡಿ ಸಾಯಿಬಾಬ ದೇವಾಲಯ ಟ್ರಸ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸಾಲ ನೀಡಿದೆ. 
ಯೋಜನೆ ಪೂರ್ಣಗೊಳಿಸುವುದಕ್ಕಾಗಿ ಆರ್ಥಿಕ ಸಹಾಯ ಕೇಳಲು ಬಿಜೆಪಿ ನೇತೃತ್ವದ ಸರ್ಕಾರ ತೀರ್ಮಾನಿಸಿತ್ತು. ಇದರಂತೆ ಸರ್ಕಾರದ ಪ್ರತಿನಿಧಿಗಳು ಶಿರಡಿ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಬಿಜೆಪಿ ನಾಯಕ ಸುರೇಶ್ ಹವಾರೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಈ ಬಳಿಕ ಶಿರಡಿ ಟ್ರಸ್ಟ್ ಸರ್ಕಾರಕ್ಕೆ 500 ಕೋಟಿ ರೂಪಾಯಿ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. 

Advertisement

Advertisement

ಇದೆ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಯೋಜನೆಗೆ ಈ ಪ್ರಮಾಣದಲ್ಲಿ ಬಡ್ಡಿ ರಹಿತ ಸಾಲ ನೀಡಲಾಗಿದ್ದು, ಹಣವನ್ನು ಹಿಂತಿರುಗಿಸುವುದಕ್ಕೂ ಯಾವುದೇ ಗಡುವು ವಿಧಿಸಲಾಗಿಲ್ಲ. 
ಶಿರಡಿ ಸಾಯಿಬಾಬ ದೇವಾಲಯ- ಗೋದಾವರಿ-ಮರಾಠವಾಡ ನೀರಾವರಿ ಅಭಿವೃದ್ಧಿ ಕಾರ್ಪೊರೇಷನ್ ಎಂಒಯುಗೆ ಸಹಿ ಹಾಕಿದ್ದು, ದೇವಾಲಯದ ಇತಿಹಾಸದಲ್ಲೇ ಇದೊಂದು ವಿಶೇಷವಾದ ಬೆಳವಣಿಗೆ ಎಂದು ಟ್ರಸ್ಟ್ ನ ಹಿರಿಯ ಅಧಿಕಾರಿ ಹೇಳಿದ್ದಾರೆ.  ಒಟ್ಟು 1,200 ಕೋಟಿ ರೂಪಾಯಿ ಮೊತ್ತದ ನೀರಾವರಿ ಯೋಜನೆಗೆ ದೇವಾಲಯ ಬಡ್ಡಿರಹಿತವಾಗಿ 500 ಕೋಟಿ ರೂಪಾಯಿ ನೀಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement