ಶ್ರೀನಗರ: ಭಾರತ-ಪಾಕಿಸ್ತಾನ ದೇಶಗಳು ಪರಸ್ಪರ ಸ್ನೇಹದಿಂದ ಕೈ ಜೋಡಿಸಿದ ದಿನವೇ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಶ್ರೀನಗರದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರವೇ ದೊಡ್ಡ ಸಮಸ್ಯೆ ಎಂದು ಬಣ್ಣಿಸಲಾಗುತ್ತಿದೆ. ಆದರೆ ನನ್ನ ಪ್ರಕಾರ ಇದು ಸಮಸ್ಯೆಯೇ ಅಲ್ಲ. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಪರಸ್ಪರ ಸ್ನೇಹದಿಂದ ಕೈ ಜೋಡಿಸಿದ ದಿನವೇ ಈ ಸಮಸ್ಯೆ ಬಗೆ ಹರಿಯುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸ್ನೇಹಮಯ ವಾತಾವರಣ ಸೃಷ್ಟಿಗೆ ತಾವು ಮತ್ತು ತಮ್ಮ ಪಕ್ಷ ಸದಾ ಮುಂದಿರುತ್ತದೆ. ಭಾರತ ಪಾಕ್ ಸ್ನೇಹ ವೃದ್ಧಿಗಾಗಿ ಸರ್ಕಾರಗಳು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ತಮ್ಮ ಬೆಂಬಲ ಇರುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರ ವಿರುದ್ಧ ನೇರವಾಗಿ ಟೀಕಾ ಪ್ರಹಾರ ನಡೆಸಿದ ಫಾರೂಕ್ ಅಬ್ದುಲ್ಲಾ, ಹಾಲಿ ರಾಜ್ಯಪಾಲರು ಜನ ವಿರೋಧಿ ನಿರ್ಧಾರಗಳ ತೆಗೆದುಕೊಳ್ಳುತ್ತಿದ್ದು ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಸಂವಿಧಾನ 35ಎ ರಕ್ಷಣೆಗೆ ನಾವು ಸದಾ ಸಿದ್ದ ಇದಕ್ಕಾಗಿ ಎಂತಹುದೇ ಹೋರಾಟಕ್ಕೂ ನಾವು ಸಿದ್ಧರಿರುತ್ತೇವೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ 35ಎ ಯನ್ನು ಬದಲಿಸುತ್ತದೆ. ಈ ಬಗ್ಗೆ ಕಾಶ್ಮೀರದ ಮತದಾರರು ಎಚ್ಚರದಿಂದಿರಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics