ಇಮ್ರಾನ್ ಖಾನ್ 
ದೇಶ

ಪಾಕಿಸ್ತಾನ ನಿಮ್ಮ ಬಳಕೆಯ ಅಸ್ತ್ರವಾಗುವುದಿಲ್ಲ: ಅಮೆರಿಕಾಗೆ ಇಮ್ರಾನ್ ಖಾನ್

ಅಮೆರಿಕ ವಿರುದ್ಧ ಪಾಕಿಸ್ತಾನವನ್ನು ದೂರ ತಳ್ಳಿರುವ ಆರೋಪ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಮ್ಮನ್ನು ಅಸ್ತ್ರದಂತೆ ಬಳಕೆ ಮಾಡುವ ಅಮೆರಿಕದೊಂದಿಗೆ ಬಾಂಧವ್ಯ ಹೊಂದುವುದಕ್ಕೆ ಸಾಧ್ಯವಿಲ್ಲ

ಇಸ್ಲಾಮಾಬಾದ್: ಅಮೆರಿಕ ವಿರುದ್ಧ ಪಾಕಿಸ್ತಾನವನ್ನು ದೂರ ತಳ್ಳಿರುವ ಆರೋಪ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಮ್ಮನ್ನು ಅಸ್ತ್ರದಂತೆ ಬಳಕೆ ಮಾಡುವ ಅಮೆರಿಕದೊಂದಿಗೆ ಬಾಂಧವ್ಯ ಹೊಂದುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
"ನಮ್ಮನ್ನು ಅಸ್ತ್ರದಂತೆ ಬಳಕೆ ಮಾಡುವ ಅಮೆರಿಕದೊಂದಿಗೆ ನಾವು ದ್ವಿಪಕ್ಷೀಯ ಬಾಂಧವ್ಯ ಹೊಂದುವುದಕ್ಕೆ ಸಾಧ್ಯವಿಲ್ಲ, ಹಣ ಪಡೆದು ಬೇರೆಯವರ ಯುದ್ಧ ನಾವು ಮಾಡುವುದಕ್ಕೆ ಸಿದ್ಧವಿಲ್ಲ ಎಂದು ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  ನಾವು ಅಸ್ತ್ರದಂತೆ ಬಳಕೆಯಾಗುವ ಪರಿಸ್ಥಿತಿಯನ್ನು ಮತ್ತೊಮ್ಮೆ ಎದುರಿಸುವುದಕ್ಕೆ ಸಿದ್ಧವಿಲ್ಲ. ಈ ರೀತಿಯಾಗುವುದರಿಂದಾಗಿ ನಾವು ಜೀವಹಾನಿಯನ್ನಷ್ಟೇ ಅಲ್ಲದೇ ಬುಡಕಟ್ಟು ಪ್ರದೇಶಗಳನ್ನೂ ಕಳೆದುಕೊಳ್ಳಬೇಕಾಗುತ್ತಿದೆ, ನಮ್ಮ ಘನತೆಯನ್ನೂ ಕಳೆದುಕೊಳ್ಳಬೇಕಾಗುತ್ತಿದೆ, ಅಮೆರಿಕಾದೊಂದಿಗೆ ನಾವು ಸೂಕ್ತವಾದ ಬಾಂಧವ್ಯವನ್ನು ಬಯಸುತ್ತಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಅಮೆರಿಕಾದೊಂದಿಗೆ ಯಾವ ರೀತಿಯ ಬಾಂಧವ್ಯ ಬಯಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಇಮ್ರಾನ್ ಖಾನ್, ಚೀನಾದೊಂದಿಗಿನ ಪಾಕಿಸ್ತಾನದ ಬಾಂಧವ್ಯದ ಉದಾಹರಣೆ ನೀಡಿದ್ದು, ಚೀನಾದೊಂದಿಗೆ ನಮ್ಮ ಬಾಂಧವ್ಯ ಒಂದೇ ಆಯಾಮದಲ್ಲಿಲ್ಲ, ನಮ್ಮ ನಡುವೆ ಇರುವುದು ವ್ಯಾಪಾರ ವಹಿವಾಟಿನ ಸಂಬಂಧ, ಅದೇ ರೀತಿಯ ಸಂಬಂಧವನ್ನು ಚೀನಾದೊಂದಿಗೂ ಬಯಸುತ್ತಿದ್ದೇವೆ ಎಂದು ಖಾನ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ