ದೇಶ

ಸ್ವಾಭಿಮಾನ ವಿವಾಹ ಸಮಾರಂಭದಲ್ಲಿ ಮರ್ಯಾದಾ ಹತ್ಯೆ ಯತ್ನದ ಸಂತ್ರಸ್ತೆ ಕೌಸಲ್ಯ ಮರು ವಿವಾಹ!

Srinivas Rao BV
ಸಾಮಾಜಿಕ ಕಾರ್ಯಕರ್ತೆ ಹಾಗೂ ಮರ್ಯಾದಾ ಹತ್ಯೆ ಯತ್ನದ ಸಂತ್ರಸ್ತೆ ಕೌಸಲ್ಯ ಕಲಾವಿದರಾದ ಶಕ್ತಿ ಅವರನ್ನು ಸ್ವಾಭಿಮಾನ ವಿವಾಹ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. 
ಕೊಯಂಬತ್ತೂರಿನ ಗಾಂಧಿಪುರಂ ನಲ್ಲಿ ದ್ರಾವಿಡರ್ ವಿದುಥಲೈ ಕಳಗಂ ಸ್ಥಾಪಕ ಕೊಲಥೂರ್ ಮಣಿ, ಥಂಥೈ ಪೆರಿಯಾರ್ ದ್ರಾವಿಡರ್ ಕಳಗಂ ಪ್ರಧಾನ ಕಾರ್ಯದರ್ಶಿ ಕೆ ರಾಮಕೃಷ್ಣನ್, ವಿಧುಥಲೈ ಚಿರುಥೈಗಾಳ್ ಕಾಟ್ಚಿಯ ಉಪ ಪ್ರಧಾನ ಕಾರ್ಯದರ್ಶಿ ವಣ್ಣಿಯರಸು ಅವರು ಥಂಥೈ ಪೆರಿಯಾರ್ ದ್ರಾವಿಡರ್ ಕಳಗಂ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೌಸಲ್ಯ-ಶಕ್ತಿ ವಿವಾಹ ನೆರವೇರಿದೆ. 
ಕೌಸಲ್ಯ ಅವರ ಮೊದಲ ಪತಿ ಶಂಕರ್ ದಲಿತ ಸಮುದಾಯಕ್ಕೆ ಸೇರಿದ್ದವರಾಗಿದ್ದರು, ಅವರನ್ನು 2016 ರಲ್ಲಿ ಕೌಸಲ್ಯ ಕುಟುಂಬ ಸದಸ್ಯರು ಹತ್ಯೆ ಮಾಡಿದ್ದರು, ದಿಂಡಗಲ್ ನ ಪಳಣಿಯ ಮೂಲದವರಾಗಿದ್ದ ಕೌಸಲ್ಯ ತನ್ನ ಪತಿಯ ಹತ್ಯೆ ನಡೆದಾಗಿನಿಂದ ಜಾತಿ ವಿರೋಧಿ ಚಳುವಳಿಗೆ ಧುಮುಕಿದ್ದರು. 
ದಕ್ಷಿಣ ಭಾರತದಲ್ಲಿ ಬಳಕೆ ಮಾಡುವ ವಿಶಿಷ್ಟವಾದ ಕಲೆಯ ಸಾಧನ ಪರಾಯಿ ಅಥವಾ ಥಾಪ್ಪುವನ್ನು ನುಡಿಸುವ ಕಲಾವಿದ ಶಕ್ತಿ ಅವರನ್ನು 2 ನೇ ವಿವಾಹವಾಗಿರುವ ಕೌಸಲ್ಯ, ತನ್ನ ದಿವಂಗತ ಪತಿಯ ಗ್ರಾಮದಲ್ಲಿ ಮಕ್ಕಳಿಗೆ  ಪರಾಯಿ ಅಥವಾ ಥಾಪ್ಪುವನ್ನು ನುಡಿಸುವುದನ್ನು ಕಲಿಸುವ ಮೂಲಕ ಯುವಜನತೆಯಲ್ಲಿ ಜಾತಿಯತೆ ಕುರಿತಾಗಿರುವ ಭಾವನೆಗಳನ್ನು ತೊಡೆದುಹಾಕುವ ಕೆಲಸ ಮಾಡುತ್ತಿದ್ದಾರೆ. 
2016 ರ ಮಾ.13 ರಂದು ಕೌಸಲ್ಯ ಹಾಗೂ ಶಂಕರ್ ಮೇಲೆ ತಮಿಳುನಾಡಿನ ಉಡುಮಲಪೇಟ್ಟೈ ನಲ್ಲಿ ದಾಳಿ ನಡೆದಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಶಂಕರ್ ನಿಧನರಾಗಿದ್ದರೆ, ಕೌಸಲ್ಯ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಈ ದಾಳಿಯನ್ನು ಕೌಸಲ್ಯ ತಂದೆಯೇ ಯೋಜಿಸಿದ್ದರು ಎಂಬುದು ನಂತರ ಬಹಿರಂಗವಾಗಿತ್ತು. ಕೌಸಲ್ಯ ಪೋಷಕರೂ ಸೇರಿದಂತೆ 11 ಜನರು ಜೌಲು ಶಿಕ್ಷೆ ಅನುಭವಿಸುತ್ತಿದ್ದಾರೆ. 
SCROLL FOR NEXT