ದೇಶ

ಉರ್ಜಿತ್ ಪಟೇಲ್ ರಾಜೀನಾಮೆಯಿಂದ ಆರ್ಥಿಕತೆ ಮೇಲೆ ತೀವ್ರ ಹೊಡೆತ- ಮನ್ ಮೋಹನ್ ಸಿಂಗ್

Nagaraja AB

ನವದೆಹಲಿ:  ಉರ್ಜಿತ್ ಪಟೇಲ್ ಆರ್ ಬಿಐ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ದುರದೃಷ್ಟಕರವಾಗಿದ್ದು, ರಾಷ್ಟ್ರದ ಆರ್ಥಿಕತೆ ಮೇಲೆ  ತೀವ್ರ ಹೊಡೆತ ಬೀಳಲಿದೆ ಎಂದು ಮಾಜಿ ಪ್ರಧಾನಮಂತ್ರಿ ಡಾ.ಮನ್ ಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಉರ್ಜಿತ್ ಪಟೇಲ್ ರಾಜೀನಾಮೆ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಮನ್ ಮೋಹನ್ ಸಿಂಗ್, ಉರ್ಜಿತ್ ಪಟೇಲ್ ಉತ್ತಮ ಅರ್ಥಶಾಸ್ತ್ರಜ್ಞರು ಎಂಬುದು ನನ್ನಗೆ ಗೊತ್ತಿದೆ. ಭಾರತದ ಆರ್ಥಿಕ ಸಂಸ್ಥೆಗಳು ಹಾಗೂ ಆರ್ಥಿಕ ನೀತಿ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದ ಡಾ. ಉರ್ಜಿತ್ ಪಟೇಲ್ ಹಠಾತ್ತನೆ ರಾಜೀನಾಮೆ ನೀಡಿರುವುದರಿಂದ ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

ಉರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ಮೋದಿ ಸರ್ಕಾರ ಭಾರತದ 3 ಟ್ರಿಲಿಯನ್ ಡಾಲರ್ ಆರ್ಥಿಕ ಅಡಿಪಾಯವನ್ನು ನಾಶಪಡಿಸಲು ಪ್ರಯತ್ನಿಸುತ್ತಿಲ್ಲ ಎಂಬ ಭರವಸೆ ಇಟ್ಟುಕೊಂಡಿದ್ದೇನೆ ಎಂದು ಅವರು ಹೇಳಿದ್ದು, ಉರ್ಜಿತ್ ಪಟೇಲ್ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸುವುದಾಗಿ ಹೇಳಿದ್ದಾರೆ.

SCROLL FOR NEXT