ನವದೆಹಲಿ: ಭೂ ವ್ಯವಹಾರ ಡೀಲ್ ಸಂಬಂಧ ಉದ್ಯಮಿ ರಾಬರ್ಟ್ ವಾದ್ರಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ವಾದ್ರಾ, ನಾನು ತನಿಖೆಗೆ ಸಹಕರಿಸಲಿದ್ದು, ದೇಶ ಬಿಟ್ಟು ಬೇರೆ ಯಾವುದೇ ದೇಶಕ್ಕೆ ಓಡಿ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಬ್ಲ್ಯಾಕ್ ಮೇಲ್ ಗಳಿಗಾಗಿ ನನ್ನ ಹೆಸರು ಬಳಕೆಯಾಗುವುದು ನನಗೆ ಇಷ್ಟವಿಲ್ಲ, ನನ್ನ ವಿರುದ್ಧದ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದ್ದಾಗಿವೆ, ನಡೆಯುವ ತನಿಖಾ ಪ್ರಕ್ರಿಯೆ ಕಾನೂನು ಪ್ರಕಾರ ನ್ಯಾಯ ಸಮ್ಮತವಾಗಿರಬೇಕು ಎಂದು ರಾಬರ್ಟ್ ವಾದ್ರಾ ತಿಳಿಸಿದ್ದಾರೆ.
ಪ್ರತಿ ನೊಟೀಸ್ ಗೂ ನಾನು ಪ್ರತಿಕ್ರಿಯೆ ನೀಡಿದ್ದೇನೆ, ನನ್ನ ಕುಟುಂಬ ಒತ್ತಡದಲ್ಲಿದೆ, ನನ್ನ ತಾಯಿ ಅನಾರೋಗ್ಯ ಗೊಂಡಿದ್ದಾರೆ, ನನ್ನ ಮನೆಯ ಆವರಣದಲ್ಲಿ ಬೀಗಗಳನ್ನು ಒಡೆಯಲಾಗಿದೆ, ಪ್ರತಿಯೊಂದು ಕೆಲಸವು ಕಾನೂನು ಪ್ರಕಾರವಾಗಿಯೇ ನಡೆಯಬೇಕು ಎಂದು ಹೇಳಿದ್ದಾರೆ.