ಜ್ಯೋತಿರಾದಿತ್ಯ ಸಿಂಧಿಯಾ 
ದೇಶ

30 ವರ್ಷಗಳ ಹಿಂದೆ ಅಧಿಕಾರ ವಂಚಿತರಾಗಿದ್ದ ಮಾಧವ್ ರಾವ್ ಸಿಂಧಿಯಾ, ಇಂದು ಜ್ಯೋತಿರಾದಿತ್ಯ ಸಿಂಧಿಯಾ!

30 ವರ್ಷಗಳ ನಂತರ ಮಧ್ಯಪ್ರದೇಶದಲ್ಲಿ ರಾಜಕೀಯ ಇತಿಹಾಸ ಮರುಕಳಿಸಿದ್ದು, ಅಂದು ಕಾಂಗ್ರೆಸ್ ಮುಖಂಡ ಮಾಧವ್ ರಾವ್ ಸಿಂಧಿಯಾ ಎದುರಿಸಿದ್ದ ರಾಜಕೀಯ ಪರಿಸ್ಥಿತಿಯನ್ನೇ ಇಂದು ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಸಹ ಎದುರಿಸಿದ್ದಾರೆ.

30 ವರ್ಷಗಳ ನಂತರ ಮಧ್ಯಪ್ರದೇಶದಲ್ಲಿ ರಾಜಕೀಯ ಇತಿಹಾಸ ಮರುಕಳಿಸಿದ್ದು, ಅಂದು ಕಾಂಗ್ರೆಸ್ ಮುಖಂಡ ಮಾಧವ್ ರಾವ್ ಸಿಂಧಿಯಾ ಎದುರಿಸಿದ್ದ ರಾಜಕೀಯ ಪರಿಸ್ಥಿತಿಯನ್ನೇ ಇಂದು ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಸಹ ಎದುರಿಸಿದ್ದಾರೆ. 
1989 ರಲ್ಲಿ ಮಾಧವ್ ರಾವ್ ಸಿಂಧಿಯಾ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಹಿರಿಯ ನಾಯಕ ಅರ್ಜುನ್ ಅವರ ತೀವ್ರ ವಿರೋಧದ ಹಿನ್ನೆಲೆಯಲ್ಲಿ  ಸಿಂಧಿಯಾ ಸಿಎಂ ಹುದ್ದೆಯಿಂದ ವಂಚಿತರಾಗಿದ್ದರು. 
ಚೌರ್ಹತ್ ಲಾಟರಿ ಹಗರಣದ ಆರೋಪ ಎದುರಿಸುತ್ತಿದ್ದ ಅರ್ಜುನ್ ಸಿಂಗ್ ರಾಜೀನಾಮೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಾಧವ್ ರಾವ್ ಸಿಂಧಿಯಾ ಸಿಎಂ ಆಗುವ ಅವಕಾಶ ಇತ್ತು. ಆದರೆ ಅಂದಿನ ಕಾಂಗ್ರೆಸ್ ಹೈಕಮಾಂಡ್ ಆಗಿದ್ದ ರಾಜೀವ್ ಗಾಂಧಿ ಅವರ ಮೇಲೆ ಒತ್ತಡ ಹೇರಿ ಮಾಧವ್ ರಾವ್ ಸಿಂಧಿಯಾಗೆ ಸಿಎಂ ಹುದ್ದೆ ಕೈತಪ್ಪುವಂತೆ ಮಾಡಿ ಆ ಹುದ್ದೆ ಮೋತಿಲಾಲ್ ವೋರಾ ಅವರಿಗೆ ಸಿಗುವಂತೆ ಮಾಡುವುದರಲ್ಲಿ ಅರ್ಜುನ್ ಸಿಂಗ್ ಯಶಸ್ವಿಯಾಗಿದ್ದರು. ಹತ್ತಿರ ಹತ್ತಿರ 30 ವರ್ಷಗಳ ನಂತರ ಅಂದರೆ ಮೊನ್ನೆ ನಡೆದ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷದಿಂದ ಜ್ಯೋತಿರಾದಿತ್ಯ ಸಿಂಧಿಯಾ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ 72 ವರ್ಷದ ಕಮಲ್ ನಾಥ್ ಅವರನ್ನು ಸಿಎಂ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್