ದೇಶ

ಭವಿಷ್ಯದಲ್ಲಿ ಮಹಿಳಾ ದಲೈಲಾಮ ಇದ್ದರೂ ಇರಬಹುದು: ದಲೈಲಾಮಾ

Shilpa D
ಮುಂಬಯಿ: ಭವಿಷ್ಯದಲ್ಲಿ ಮಹಿಳಾ ದಲೈಲಾಮ ಇರಲಿದ್ದಾರೆ ಎಂದು ಟಿಬೆಟಿಯನ್ ಧರ್ಮಗುರು  ದಲೈಲಾಮ ಹೇಳಿದ್ದಾರೆ. 
ಬಾಂಬೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ದಲೈಲಾಮ ಅವರು ಬುದ್ದ ಭಗವಾನ್ ಹೆಣ್ಣು ಮತ್ತು ಗಂಡು ಇಬ್ಬರಿಗೂ ಸಮಾನ ಹಕ್ಕು ನೀಡಿದ್ದಾರೆ ಹೀಗಾಗಿ, ಭವಿಷ್ಯದಲ್ಲಿ ಮಹಿಳಾ ದಲೈಲಾಮ ಇರಲಿದ್ದಾರೆ.
ಭಾರತ ಮತ್ತು ಟಿಬೆಟ್ ನಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಪ್ರಮಾಣ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಪ್ರೆಂಚ್ ಮ್ಯಾಗಜೀನ್ ಸಂಪಾದಕರು ಬಂದು ನನ್ನ ಪ್ರಶ್ನೆಮಾಡಿದ್ದರು. 
ಭವಿಷ್ಯದಲ್ಲಿ ಮಹಿಳಾ ದಲೈಲಾಮ ಬರಲಿದ್ದಾರಾ ಎಂದು ಪ್ರಶ್ನಿಸಿದ್ದರು. ಬೌದ್ಧ ಧರ್ಮ ಉದಾರವಾದಿಯಾಗಿದೆ ಹೀಗಾಗಿ ಭವಿಷ್ಯದಲ್ಲಿ ಮಹಿಳಾ ಧರ್ಮಗುರು ಬರುವ ಸಾಧ್ಯತೆಯಿದೆ ಎಂದು ಹೇಳಿದ್ದನ್ನು ನೆನಪಿಸಿಕೊಂಡರು. ಕ್ಕಳಿಗೆ ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ಬಹಳ ಮಹತ್ವವಾಗಿದೆ.
SCROLL FOR NEXT