ಬೆಂಗಳೂರು: ಮಹಿಳೆಗೆ ಬರೊಬ್ಬರಿ 90 ಲಕ್ಷ ರೂಪಾಯಿಗೆ ಉಂಡೆ ನಾಮ ತಿಕ್ಕಿದ ಫೇಸ್ ಬುಕ್ ಫ್ರೆಂಡ್! 
ದೇಶ

ಬೆಂಗಳೂರು: ಫೇಸ್ ಬುಕ್ ಫ್ರೆಂಡ್ ನಿಂದ ಮಹಿಳೆಗೆ ಬರೊಬ್ಬರಿ 90 ಲಕ್ಷ ರೂಪಾಯಿ ವಂಚನೆ!

ನೃತ್ಯ ನಿರ್ದೇಶಕನ ಸೋಗಿನಲ್ಲಿದ್ದ ವ್ಯಕ್ತಿಯೋರ್ವ ಫೇಸ್ ಬುಕ್ ನಲ್ಲಿದ್ದ ತನ್ನ ಮಹಿಳಾ ಫ್ರೆಂಡ್ ಗೆ ಬರೊಬ್ಬರಿ 90 ಲಕ್ಷ ರೂಪಾಯಿ ಉಂಡೆ ನಾಮ ತಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ನೃತ್ಯ ನಿರ್ದೇಶಕನ ಸೋಗಿನಲ್ಲಿದ್ದ ವ್ಯಕ್ತಿಯೋರ್ವ ಫೇಸ್ ಬುಕ್ ನಲ್ಲಿದ್ದ ತನ್ನ ಮಹಿಳಾ ಫ್ರೆಂಡ್ ಗೆ ಬರೊಬ್ಬರಿ 90 ಲಕ್ಷ ರೂಪಾಯಿ ಉಂಡೆ ನಾಮ ತಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಫೇಸ್ ಬುಕ್ ಸ್ನೇಹಿತೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದ ವ್ಯಕ್ತಿ ವಾದಿರಾಜ್ ಗೌಡ ಆಕೆಗೆ 90 ಲಕ್ಷ ರೂಪಾಯಿ ವಂಚಿಸಿದ್ದು, ಯಶವಂತ ಪುರ ಪೊಲೀಸರ ಅತಿಥಿಯಾಗಿದ್ದಾನೆ. 
"ನನ್ನ ಹಣವನ್ನಷ್ಟೇ ನಾನು ನೀಡಿಲ್ಲ, ಬದಲಾಗಿ ನನ್ನ ಸ್ನೇಹಿತರು, ಸಂಬಂಧಿಕರು ಕಷ್ಟಪಟ್ಟು ಸಂಪಾದನೆ ಮಾಡಿದ್ದ ಹಣವನ್ನೂ ಪಡೆದು ಆತನಿಗೆ ನೀಡಿದ್ದೆ, ನನ್ನ ಘನತೆ-ಗೌರವಗಳನ್ನೂ ಪಣವಾಗಿಟ್ಟಿದ್ದೆ ಎಂದು ಸಂತ್ರಸ್ತ ಮಹಿಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ. 
ಮೂಲತಃ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಯಶವಂತ ಪುರದ ಸುಬೇದಾರ್ ಪಾಳ್ಯದ ನಿವಾಸಿಯಾಗಿದ್ದ,  ವಾದಿರಾಜ್ ಗೌಡ 2017 ರಲ್ಲಿ ಈ ಮಹಿಳೆಯೊಂದಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿದ್ದ. ಉತ್ತಮ ಸ್ನೇಹ ಸಂಪಾದಿಸಿದ ಆತ ಬಿಡಿಎ ಸೈಟ್ ಗಳನ್ನು ಖರೀದಿಸಲು ಆಸಕ್ತರಿರುವ ಸ್ನೇಹಿತರನ್ನು ಸಂಬಂಧಿಕರನ್ನು ಪರಿಚಯ ಮಾಡಿಸುವಂತೆ ಮಹಿಳೆಗೆ ಮನವಿ ಮಾಡಿದ್ದ.  ಸೈಟ್ ಮೇಲೆ ಹೂಡಿಕೆ ಮಾಡಲು ಆ ಮಹಿಳೆ ತನ್ನ ಸ್ನೇಹಿತರು, ಸಂಬಂಧಿಕರು, ಸಹೋದರಿ ಸೇರಿದಂತೆ ಒಟ್ಟು 45 ಜನರಿಂದ ಬರೊಬ್ಬರಿ 95 ಲಕ್ಷ ರೂಪಾಯಿ ಪಡೆದು ತನ್ನ ಫೇಸ್ ಬುಕ್ ಸ್ನೇಹಿತನಿಗೆ ನೀಡಿದ್ದರು. ಆದರೆ ಅಕ್ಟೋಬರ್ ತಿಂಗಳಲ್ಲಿ ಪರಾರಿಯಾಗಿದ್ದ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT