ಕೊಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶೈಲಿಯಲ್ಲಿ ಎನ್ ಕೌಂಟರ್ ಗೆ ಆದೇಶಿಸಲಾಗುವುದು ಎಂದು ಬಿಜೆಪಿ ಉಪಾಧ್ಯಕ್ಷೆ ರಾಜಕುಮಾರಿ ಕೇಶರಿ ಹೇಳಿದ್ದಾರೆ.
ಬುರ್ದ್ವಾನ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕೆ ಸಮಾರಂಭದಲ್ಲಿ ಮಾತನಾಡಿದ ಅವರು, ಎನ್ ಕೌಂಟರ್ ಮಾಡಬೇಕಾದ ವ್ಯಕ್ತಿಗಳ ಪಟ್ಟಿ ಸಿದ್ದ ಪಡಿಸುವಂತೆ ಕೇಂದ್ರ ನಾಯಕರುಗಳು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ರಾಜಕುಮಾರಿ ಕೇಶರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಗೂಂಡಾ ರಾಜ್ಯ ನಿರ್ಮೂಲನೆ ಮಾಡಲು ಇರುವ ಒಂದೇ ದಾರಿ ಎನ್ ಕೌಂಟರ್ ಆಗಿದೆ. ಹೀಗಾಗಿ ಕೇಸರಿ ಈ ರೀತಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಕೇವಲ ಆಕೆ ಮಾತ್ರವಲ್ಲ ನಾನು ಹಾಗೂ ಬಿಜೆಪಿ ಕಾರ್ಯದರ್ಶಿ ಸಾಯಂತಂ ಕೂಡ ಇದೇ ಮಾತನ್ನು ಈ ಮೊದಲು ಹೇಳಿದ್ದೆವು. ರಾಜ್ಯದಲ್ಲಿ ಅಪರಾಧ ತಡೆಗಟ್ಟಲು ಇರುವ ದಾರಿ ಇದೊಂದೇ, ಗಂಗಾಜಲ ಮೂಲಕ ನಾವು ಇದನ್ನು ಶುಚಿಗೊಳಿಸಲು ಸಾಧ್ಯವಿಲ್ಲ, ಆಕೆಯ ವಿರುದ್ಧ ಯಾವುದೇ ಶಿಸ್ತುಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.