ಮುಂಬೈ: ಮುಂಬೈ ಮಹಾನಗರದ ಪ್ರಮುಖ ರಸ್ತೆಗಳಲ್ಲಿ ನಿಯಮ ಮೀರಿ ಅತೀ ವೇಗದಲ್ಲಿ ವಾಹನ ಚಲಾಯಿಸಿದ ಕಾರಣಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗೆ ಮುಂಬೈ ಪೊಲೀಸರು ಬರೋಬ್ಬರಿ 13 ಸಾವಿರ ರುಪಾಯಿ ದಂಡ ವಿಧಿಸಿದ್ದಾರೆ.
2018ರ ಜನವರಿ 12 ರಿಂದ 2018 ಆಗಸ್ಟ್ 12ರವರೆಗಿನ ಅವಧಿಯಲ್ಲಿ ಮುಖ್ಯಮಂತ್ರಿ ಫಡ್ನವಿಸ್ ವಾಹನ 13 ಬಾರಿ ಪ್ರಯಾಣ ಮಾಡಿದೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು ಹೀಗಾಗಿ ಪ್ರತಿ ನಿಯಮ ಉಲ್ಲಂಘನೆಗೆ 1 ಸಾವಿರ ರುಪಾಯಿಯಂತೆ ಒಟ್ಟು 13 ಸಾವಿರ ರುಪಾಯಿ ದಂಡ ವಿಧಿಸಿದೆ.
13 ಸಾವಿರ ರುಪಾಯಿ ದಂಡ ವಿಧಿಸಿದ ಬಳಿಕ ಮುಂಬೈ ಪೊಲೀಸರು ಚಲನ್ ರದ್ದು ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹಮ್ಮದ್ ಆರ್ ಟಿಐಯಡಿ ಅರ್ಜಿ ಸಲ್ಲಿಸಿದ್ದರು.