ಭೂಪಾಲ್ : 1984 ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಎಫ್ ಐಆರ್, ಜಾರ್ಜ್ ಶೀಟ್ ದಾಖಲಾಗಿಲ್ಲ ಎಂದು ಮಧ್ಯಪ್ರದೇಶ ನೂತನ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ.
1984ರಲ್ಲಿ ಸಂಭವಿಸಿದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಕಮಲ್ ನಾಥ್ ಅವರನ್ನು ತಳಕು ಹಾಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವಂತೆ ಕಮಲ್ ನಾಥ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ನಾಥ್, ಸಿಖ್ ವಿರೋಧಿ ದಂಗೆ ನಡೆದ ನಂತರ 1991 ಹಾಗೂ ಅನೇಕ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಯಾರೊಬ್ಬರೂ ಏನನ್ನೂ ಹೇಳಿಲ್ಲ. ನನ್ನ ವಿರುದ್ಧ ಯಾವುದೇ ಪ್ರಕರಣವಾಗಲೀ , ಎಫ್ ಐಆರ್ , ಚಾರ್ಚ್ ಶೀಟ್ ದಾಖಲಾಗಿಲ್ಲ. ಈಗ ಪ್ರತಿಪಕ್ಷದವರು ಈ ವಿಚಾರ ಎತುತ್ತಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಯಾವುದೇ ಪ್ರತ್ಯೇಕ್ಷದರ್ಶಿಗಳಿದ್ದರೆ ಹೇಳಲಿ ಎಂದು ಪ್ರಶ್ನಿಸಿದರು.